ಕಾಬೂಲ್: ತಾಲಿಬಾನ್ ಗುರುವಾರ ಆಯೋಜಿಸಿದ್ದ ಧಾರ್ಮಿಕ ಮುಖಂಡರ ಸಭೆಯಲ್ಲಿ ಭಾಗವಹಿಸಿದ್ದಮಿಯಾನ್ ಪ್ರಾಂತ್ಯದ ಸೈಯದ್ ನಸ್ರುಲ್ಲಾ ವೈಜಿ ಅವರು ಬಾಲಕಿಯರ ಪ್ರೌಢಶಾಲೆಗಳನ್ನು ಪುನಃ ತೆರೆಯುವಂತೆ ಮನವಿ ಮಾಡಿದರು. ಅಫ್ಗಾನಿಸ್ತಾನದ ವಿವಿಧೆಡೆಯಿಂದ ಬಂದಿದ್ದ ಮೂರು ಸಾವಿರಮುಖಂಡರು (ಪುರುಷರು) ಈ ಸಭೆಯಲ್ಲಿ ಭಾಗವಹಿಸಿದ್ದರು
ಆಗಸ್ಟ್‌ನಲ್ಲಿ ತಾಲಿಬಾನ್ ಅಫ್ಗಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ನಡೆದ ಮೊದಲ ಸಭೆಯಲ್ಲಿ ‘ಬಾಲಕಿಯರುಕಲಿಯುತ್ತಾರೆ ಮತ್ತು ಸಮಾಜದಲ್ಲಿ ತಮ್ಮ ಮಕ್ಕಳಿಗೆ ಉತ್ತಮ ಮಾರ್ಗದರ್ಶಕರಾಗುತ್ತಾರೆ’ ಎಂದು ವೈಜಿ ಹೇಳಿದ್ದಾರೆ. ಅವರ ಮನವಿಗೆ ಎಷ್ಟರಮಟ್ಟಿಗೆ ಬೆಂಬಲ ಸಿಗುತ್ತದೆ ಅಥವಾ ಸಮಸ್ಯೆಗೆ ಪರಿಹಾರ ಸಿಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ತಾಲಿಬಾನ್ ಸರ್ಕಾರವು ಮಾರ್ಚ್‌ನಲ್ಲಿ ಬಾಲಕಿಯರಿಗಾಗಿ ಪ್ರೌಢಶಾಲೆಗಳನ್ನು ತೆರೆಯಲಾಗುವುದು ಎಂದು ಹೇಳಿದ್ದರೂ ನಂತರ ತನ್ನ ಘೋಷಣೆಯಿಂದ ಹಿಂದೆ ಸರಿದಿತ್ತು. ಆದರೆ, ತಾಲಿಬಾನ್ ಮಾತ್ರ ಇಸ್ಲಾಮಿಕ್ ಕಾನೂನಿಗೆ ಅನುಸಾರವಾಗಿ ಶಾಲೆಗಳನ್ನು ಪುನಃ ತೆರೆಯಲು ಯೋಜನೆ ರೂಪಿಸುವವರೆಗೆ ಅವು ಮುಚ್ಚಿರುತ್ತವೆ ಎಂದು ಹೇಳಿತ್ತು.
ತಾಲಿಬಾನ್‌ನ ಈ ನಡೆಯನ್ನು ಮಾನವ ಹಕ್ಕುಗಳ ಸಂಸ್ಥೆಗಳು, ಗುಂಪುಗಳು ಮತ್ತು ರಾಜತಾಂತ್ರಿಕರು ಖಂಡಿಸಿದ್ದರು.
‘ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ಸ್ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿದೆ. ಸಾಕಷ್ಟು ತ್ಯಾಗದ ನಂತರಸರ್ಕಾರವು ಅಧಿಕಾರಕ್ಕೆ ಬಂದಿದೆ. ಅದನ್ನು ಬಲಪಡಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕು’ ಎಂದು ಅಫ್ಗಾನಿಸ್ತಾನದ ಪ್ರಧಾನಿ ಮೊಹಮ್ಮದ್ ಹಸನ್ ಅಖುಂದ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.