ADVERTISEMENT

ಮದ್ಯ ತ್ಯಜಿಸಿದರೆ ಮಾನಸಿಕ ಆರೋಗ್ಯ

ಹಾಂಗ್ ಕಾಂಗ್‌ನ ವಿಶ್ವವಿದ್ಯಾಲಯದ ಅಧ್ಯಯನ

ಪಿಟಿಐ
Published 8 ಜುಲೈ 2019, 20:01 IST
Last Updated 8 ಜುಲೈ 2019, 20:01 IST
FILE PHOTO: A pint of beer is poured into a glass in a bar in London, Britain June 27, 2018. REUTERS/Peter Nicholls/File Photo
FILE PHOTO: A pint of beer is poured into a glass in a bar in London, Britain June 27, 2018. REUTERS/Peter Nicholls/File Photo   

ಬೀಜಿಂಗ್: ಮದ್ಯ ಸೇವನೆ ತ್ಯಜಿಸುವ ಮಹಿಳೆಯರು ಮಾನಸಿಕವಾಗಿ ಸುಧಾರಿತ ಜೀವನ ಕಂಡುಕೊಳ್ಳುತ್ತಾರೆ ಎಂದು ಅಧ್ಯಯನವೊಂದು ಹೇಳಿದೆ.

ಆರೋಗ್ಯಪೂರ್ಣ ಪಥ್ಯ (ಡಯಟ್‌)ದ ಭಾಗವಾಗಿ ಸ್ವಲ್ಪ ಪ್ರಮಾಣದ ಮದ್ಯ ಸೇವನೆಗೆ ಶಿಫಾರಸು ಮಾಡುವ ಬಗ್ಗೆಯೂ ಎಚ್ಚರಿಕೆ ವಹಿಸಬೇಕು ಎಂದು ಹಾಂಗ್‌ ಕಾಂಗ್ ವಿಶ್ವವಿದ್ಯಾಲಯದ ಮಿಚೆಲಿ ನಿ ಅವರು ಹೇಳಿದ್ದಾರೆ.

ಈ ಅಧ್ಯಯನವು ಕೆನಡಿಯನ್‌ ಮೆಡಿಕಲ್ ಅಸೋಸಿಯೇಷನ್‌ನ ನಿಯತಕಾಲಿಕದಲ್ಲಿ ಪ್ರಕಟವಾಗಿದ್ದು, ಅಧ್ಯಯನಕ್ಕಾಗಿ 10,386 ಜನರನ್ನು ಬಳಸಿಕೊಳ್ಳಲಾಗಿದೆ. ಇವರು 2009 ಮತ್ತು 2013 ರ ಅವಧಿಯಲ್ಲಿ ಮದ್ಯ ಸೇವಿಸದಿರುವವರು ಅಥವಾ ಸ್ವಲ್ಪಮಟ್ಟಿನ ಮದ್ಯ ಸೇವಿಸುವವರಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.