ADVERTISEMENT

ಕೋವಿಡ್-19: ವಿಶ್ವದಾದ್ಯಂತ 1.60 ಲಕ್ಷಕ್ಕೂ ಹೆಚ್ಚು ಜನರು ಬಲಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 11:25 IST
Last Updated 19 ಏಪ್ರಿಲ್ 2020, 11:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪ್ಯಾರಿಸ್: ವಿಶ್ವದಾದ್ಯಂತ ಕೊರೊನಾ ವೈರಸ್ ಸೋಂಕಿಗೆ 160,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಅವರಲ್ಲಿ ಮೂರನೇ ಎರಡರಷ್ಟು ಜನರು ಯುರೋಪಿನವರೇ ಆಗಿದ್ದಾರೆ ಎಂದು ಭಾನುವಾರ ಸುದ್ದಿಸಂಸ್ಥೆಎಎಫ್‌ಪಿ ವರದಿ ಮಾಡಿದೆ.

ಒಟ್ಟಾರೆ 2,331,318 ಪ್ರಕರಣಗಳಲ್ಲಿ ಒಟ್ಟು 160,502 ಜನರು ಮೃತಪಟ್ಟಿದ್ದಾರೆ. ಇವುಗಳಲ್ಲಿ 101,398 ಸಾವು ಮತ್ತು 1,151,820 ಸೋಂಕು ಪೀಡಿತ ಪ್ರಕರಣಗಳು ಯೂರೋಪ್‌ಗೆ ಸೇರಿವೆ. ಕೊರೊನಾ ವೈರಸ್‌ನಿಂದ ಹೆಚ್ಚು ಹಾನಿಗೊಳಗಾದ ಖಂಡ ಇದಾಗಿದೆ.

ಅಮೆರಿಕದಲ್ಲಿ ಅತಿಹೆಚ್ಚು ಅಂದರೆ 39,090 ಜನರು ಕೋವಿಡ್-19ನಿಂದ ಸಾವಿಗೀಡಾಗಿದ್ದರೆ, ಇಟಲಿಯಲ್ಲಿ 23,227, ಸ್ಪೇನ್‌ನಲ್ಲಿ 20,453, ಫ್ರಾನ್ಸ್‌ನಲ್ಲಿ 19,323 ಮತ್ತು ಬ್ರಿಟನ್‌ನಲ್ಲಿ 15,464 ಜನರು ಕೊರೊನಾ ವೈರಸ್‌ನಿಂದ ಮೃತಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.