ADVERTISEMENT

ಆಸ್ಟ್ರೇಲಿಯಾ: ಸುದ್ದಿಸಂಸ್ಥೆಗೆ ಗೂಗಲ್‌, ಫೇಸ್‌ಬುಕ್‌ ಹಣ ಪಾವತಿ ಕಡ್ಡಾಯ

ಏಜೆನ್ಸೀಸ್
Published 20 ಏಪ್ರಿಲ್ 2020, 16:55 IST
Last Updated 20 ಏಪ್ರಿಲ್ 2020, 16:55 IST
ಫೇಸ್‌ಬುಕ್ ಮತ್ತು ಗೂಗಲ್‌ ಚಿಹ್ನೆ
ಫೇಸ್‌ಬುಕ್ ಮತ್ತು ಗೂಗಲ್‌ ಚಿಹ್ನೆ   

ಕ್ಯಾನ್‌ಬೆರಾ: ಸುದ್ದಿ ಸಂಸ್ಥೆಗಳ ಸುದ್ದಿಗೆ ಗೂಗಲ್‌ ಹಾಗೂ ಫೇಸ್‌ಬುಕ್‌ ಕಡ್ಡಾಯವಾಗಿ ಹಣ ಪಾವತಿಸಬೇಕು ಎಂದು ಆಸ್ಟ್ರೇಲಿಯಾ ಸರ್ಕಾರ ಆದೇಶಿಸಿದೆ.

ಕೋವಿಡ್‌–19 ಪಿಡುಗಿನಿಂದಾಗಿ ಜಾಹೀರಾತು ಆದಾಯ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ‘ಸುದ್ದಿ ಸಂಸ್ಥೆಗಳಿಂದ ಪಡೆದ ಸುದ್ದಿಗೆ ನ್ಯಾಯೋಚಿತವಾದ ಪರಿಹಾರ ನೀಡುವ ಕುರಿತುಜುಲೈನಲ್ಲಿ ಆಸ್ಟ್ರೇಲಿಯದ ಕಾಂಪಿಟೀಷನ್‌ ಮತ್ತು ಗ್ರಾಹಕ ಆಯೋಗವು (ಎಸಿಸಿಸಿ) ಕರಡು ನಿಯಮಗಳನ್ನು ಬಿಡುಗಡೆಗೊಳಿಸಲಿದೆ’ ಎಂದು ಹಣಕಾಸು ಸಚಿವ ಜಾಶ್‌ ಫ್ರೈಡನ್‌ಬರ್ಗ್‌ ತಿಳಿಸಿದರು.

‘ಕ್ಲಾಸಿಫೈಡ್‌ ಜಾಹೀರಾತುಗಳನ್ನು ಹೊರತುಪಡಿಸಿ ಗೂಗಲ್‌ನಲ್ಲಿ ಶೇ 47 ಹಾಗೂ ಫೇಸ್‌ಬುಕ್‌ನಲ್ಲಿ ಶೇ 24ರಷ್ಟು ಆನ್‌ಲೈನ್‌ ಜಾಹೀರಾತಿಗಾಗಿಆಸ್ಟ್ರೇಲಿಯಾದ ಜಾಹೀರಾತುದಾರರು ವ್ಯಯಿಸುತ್ತಿದ್ದಾರೆ. ಫ್ರಾನ್ಸ್‌, ಸ್ಪೇನ್‌ನಂಥ ರಾಷ್ಟ್ರಗಳು ಈ ನಿಯಮವನ್ನು ಜಾರಿಗೆ ತರಲು ಪ್ರಯತ್ನಿಸಿದ್ದವು. ಆದರೆ ಅಲ್ಲಿ ಅದು ಯಶಸ್ವಿ ಆಗಿರಲಿಲ್ಲ. ಆಸ್ಟ್ರೇಲಿಯಾದಲ್ಲಿ ಇದು ಯಶಸ್ವಿ ಆಗಲಿದೆ’ ಎಂದು ಫ್ರೈಡನ್‌ಬರ್ಗ್‌ ಹೇಳಿದರು.

ADVERTISEMENT

ಕೋವಿಡ್‌–19 ಪಿಡುಗಿನ ನಂತರ ಜಾಹೀರಾತು ಸ್ಥಗಿತವಾದ ಕಾರಣ 12ಕ್ಕೂ ಅಧಿಕ ಪತ್ರಿಕೆಗಳು ತಮ್ಮ ಮುದ್ರಣವನ್ನು ನಿಲ್ಲಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.