ADVERTISEMENT

ಸಿಂಗಾಪುರ ಏರ್‌ಲೈನ್ಸ್ ಅವಘಡ: ಗುರುತ್ವಾಕರ್ಷಣಾ ಶಕ್ತಿಯ ಬದಲಾವಣೆಯೇ ಕಾರಣ

ಪಿಟಿಐ
Published 29 ಮೇ 2024, 15:52 IST
Last Updated 29 ಮೇ 2024, 15:52 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಸಿಂಗಾಪುರ : ಕಳೆದ ವಾರ ಸಿಂಗಾಪುರ ಏರ್‌ಲೈನ್ಸ್ ವಿಮಾನವು ಕೇವಲ 4.6 ಸೆಕೆಂಡ್‌ಗಳಲ್ಲಿ 178 ಅಡಿ ಕುಸಿತ ಕಂಡಿದ್ದಕ್ಕೆ ಗುರುತ್ವಾಕರ್ಷಣಾ ಶಕ್ತಿಯಲ್ಲಿನ ತ್ವರಿತ ಬದಲಾವಣೆಯೇ ಕಾರಣ ಎಂದು ಪ್ರಾಥಮಿಕ ತನಿಖಾ ವರದಿ ಬುಧವಾರ ತಿಳಿಸಿದೆ.

ಸಾರಿಗೆ ಸುರಕ್ಷತಾ ತನಿಖಾ ಸಂಸ್ಥೆಯು (ಟಿಎಸ್‌ಐಬಿ) ಈ ಕುರಿತ ವರದಿಯನ್ನು ಬಿಡುಗಡೆ ಮಾಡಿದೆ.

ADVERTISEMENT

ಮೇ 21ರಂದು, ಲಂಡನ್‌ನಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ಎಸ್‌ಕ್ಯೂ321 ವಿಮಾನವು ಮ್ಯಾನ್ಮಾರ್‌ನ ಐರಾವಡ್ಡಿ ಜಲಾನಯನ ಪ್ರದೇಶದಲ್ಲಿ ಟರ್ಬ್ಯುಲೆನ್ಸ್‌ನಿಂದಾಗಿ (ಗಾಳಿಯ ವೇಗದಲ್ಲಿ ಆಗುವ ಬದಲಾವಣೆಯಿಂದ ಉಂಟಾಗುವ ಕ್ಷೋಭೆ) ಹಠಾತ್ ಕುಸಿತ ಕಂಡಿತ್ತು. ಈ ವಿಮಾನದಲ್ಲಿ 211 ಪ್ರಯಾಣಿಕರು ಮತ್ತು 18 ಸಿಬ್ಬಂದಿ ಇದ್ದರು. ಘಟನೆಯ ನಂತರ ವಿಮಾನವನ್ನು ಬ್ಯಾಂಕಾಕ್‌ನ ಸುವರ್ಣಭೂಮಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು.

ಎಸ್‌ಕ್ಯೂ321 ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿಯ ವೈದ್ಯಕೀಯ ವೆಚ್ಚ ಮತ್ತು ಅವರಿಗೆ ಅಗತ್ಯವಿರುವ ಯಾವುದೇ ಹೆಚ್ಚುವರಿ ಸಹಾಯವನ್ನು ಮಾಡುವುದಾಗಿ ಏರ್‌ಲೈನ್ ಸಂಸ್ಥೆಯು ತಿಳಿಸಿದೆ. ಈ ವಿಮಾನದಲ್ಲಿ ಮೂವರು ಭಾರತೀಯ ಪ್ರಜೆಗಳು ಪ್ರಯಾಣಿಸುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.