ADVERTISEMENT

ಬಾಂಬ್‌ ದಾಳಿ: 23 ಸಾವು

ಏಜೆನ್ಸೀಸ್
Published 23 ಜುಲೈ 2018, 19:30 IST
Last Updated 23 ಜುಲೈ 2018, 19:30 IST

ಕಾಬೂಲ್‌: ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಭಾನುವಾರ ತಡರಾತ್ರಿ ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ 23 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದ್ದು, ಮೃತರಲ್ಲಿ ಎಎಪಿ ಸುದ್ದಿ ಸಂಸ್ಥೆಯ ವಾಹನ ಚಾಲಕರೊಬ್ಬರು ಸೇರಿದ್ದಾರೆ.

ಗಡಿಪಾರು ಶಿಕ್ಷೆಗೆ ಒಳಗಾಗಿ ದೇಶ ತೊರೆದಿದ್ದ ಅಫ್ಗಾನಿಸ್ತಾನ ಉಪಾಧ್ಯಕ್ಷ ಅಬ್ದುಲ್‌ ರಶೀದ್‌ ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಭಾರೀ ಜನರು ಸೇರಿದ್ದರು.

ಆಗ ನಡೆದ ಪ್ರಬಲ ಸ್ಫೋಟದಲ್ಲಿ 23 ಮಂದಿ ಸಾವನ್ನಪ್ಪಿದ್ದು, 107 ಮಂದಿ ಗಾಯಗೊಂಡಿದ್ದಾರೆ.

ADVERTISEMENT

ದಾಳಿಯ ಹೊಣೆಯನ್ನು ಐಎಸ್‌ ಸಂಘಟನೆ ಹೊತ್ತುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.