ADVERTISEMENT

ಗ್ರೀನ್‌ಲ್ಯಾಂಡ್‌: ಐರೋಪ್ಯ ರಾಷ್ಟ್ರಗಳ ಯೋಧರ ಪಹರೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 13:55 IST
Last Updated 15 ಜನವರಿ 2026, 13:55 IST
–
   

ನೂಕ್ (ಗ್ರೀನ್‌ಲ್ಯಾಂಡ್): ಗ್ರೀನ್‌ಲ್ಯಾಂಡ್‌ ವಶಪಡಿಸಿಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೆದರಿಕೆ ಒಡ್ಡಿರುವ ನಡುವೆಯೇ, ಫ್ರಾನ್ಸ್‌, ಜರ್ಮನಿ, ನಾರ್ವೆ, ಸ್ವೀಡನ್‌ ಸೇರಿ ಹಲವು ಯುರೋಪಿಯನ್‌ ರಾಷ್ಟ್ರಗಳ ಯೋಧರು ಗ್ರೀನ್‌ಲ್ಯಾಂಡ್‌ಗೆ ಬಂದಿಳಿದಿದ್ದಾರೆ. 

ಫ್ರಾನ್ಸ್‌ನ 15 ಯೋಧರು ಸಮರಾಭ್ಯಾಸಕ್ಕಾಗಿ ನೂಕ್‌ನಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗ್ರೀನ್‌ಲ್ಯಾಂಡ್‌ಗೆ 13 ಮಂದಿಯ ವಿಚಕ್ಷಣ ತಂಡವನ್ನು ಗುರುವಾರ ನಿಯೋಜಿಸಲಾಗುವುದು ಎಂದು ಜರ್ಮನಿ ರಕ್ಷಣಾ ಸಚಿವಾಲಯ ತಿಳಿಸಿದೆ.

ಗ್ರೀನ್‌ಲ್ಯಾಂಡ್‌ನಲ್ಲಿ ಸೇನಾ ಬಲವನ್ನು ಹೆಚ್ಚಿಸುವುದಾಗಿ ಡೆನ್ಮಾರ್ಕ್‌ ಘೋಷಿಸಿದೆ. 

ADVERTISEMENT

‘ಇಂದಿನಿಂದ ಗ್ರೀನ್‌ಲ್ಯಾಂಡ್‌ನಲ್ಲಿ ಯೋಧರ ನಿಯೋಜನೆಯನ್ನು ಹೆಚ್ಚಿಸಲಾಗುವುದು. ಯುದ್ಧವಿಮಾನಗಳು, ಯುದ್ಧನೌಕೆಗಳಲ್ಲದೇ, ನ್ಯಾಟೊ ಗುಂಪಿನ ಮಿತ್ರ ರಾಷ್ಟ್ರಗಳ ಯೋಧರನ್ನು ನಿಯೋಜಿಸಲಾಗುವುದು’ ಎಂದು ಡೆನ್ಮಾರ್ಕ್ ರಕ್ಷಣಾ ಸಚಿವ ಟ್ರೋಲ್ಸ್‌ ಪೌಲ್‌ಸೆನ್‌ ಹೇಳಿದ್ದಾರೆ.

‘ಗ್ರೀನ್‌ಲ್ಯಾಂಡ್ ವಿಚಾರವಾಗಿ ಉದ್ಭವಿಸಿರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಅಮೆರಿಕದ ಜೊತೆಗೆ ಮಾತುಕತೆ ನಡೆಸಲಾಗುವುದು. ಇದಕ್ಕಾಗಿ ತಂಡವೊಂದನ್ನು ರಚಿಸಲಾಗುವುದು‘ ಎಂದು ಡೆನ್ಮಾರ್ಕ್ ವಿದೇಶಾಂಗ ಸಚಿವ ರಾಸ್‌ಮಸೆನ್ ಘೋಷಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.