ADVERTISEMENT

ಬ್ರಿಟನ್‌ ಪ್ರಧಾನಿ ರೇಸ್‌ನಲ್ಲಿ ಮುಂಚೂಣಿಯಲ್ಲಿ ಲಿಜ್‌ ಟ್ರಸ್‌: ಸಮೀಕ್ಷೆ

ಪಿಟಿಐ
Published 3 ಆಗಸ್ಟ್ 2022, 13:50 IST
Last Updated 3 ಆಗಸ್ಟ್ 2022, 13:50 IST
ಲಿಜ್‌ ಟ್ರಸ್‌
ಲಿಜ್‌ ಟ್ರಸ್‌   

ಲಂಡನ್‌: ಕನ್ಸರ್ವೇಟಿವ್‌ ಪಕ್ಷದ ನಾಯಕತ್ವ ಹಾಗೂ ಬ್ರಿಟನ್‌ ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ವಿದೇಶಾಂಗ ಕಾರ್ಯದರ್ಶಿ ಲಿಜ್‌ ಟ್ರಸ್‌ ಮುಂಚೂಣಿಯಲ್ಲಿದ್ದಾರೆ ಎಂದು ಸಮೀಕ್ಷೆಯೊಂದು ಬುಧವಾರ ಹೇಳಿದೆ.

‘ಯುಗವ್‌’ ಎಂಬ ಸಂಸ್ಥೆ ಸಮೀಕ್ಷೆ ನಡೆಸಿದ್ದು, ಟ್ರಸ್‌ ಅವರು ಭಾರತೀಯ ಸಂಜಾತ ರಿಷಿ ಸುನಕ್‌ ಅವರಿಗಿಂತಲೂ 38 ಪಾಯಿಂಟ್ಸ್‌ ಮುನ್ನಡೆ ಹೊಂದಿರುವುದಾಗಿ ತಿಳಿಸಲಾಗಿದೆ. ಟ್ರಸ್‌ಗೆ ಶೇ 69ರಷ್ಟು ಮತ ಲಭಿಸಿದರೆ, ರಿಷಿ ಅವರು ಶೇ 31ರಷ್ಟು ಮತ ಪಡೆಯಲಿದ್ದಾರೆ ಎಂದೂ ಸಮೀಕ್ಷೆ ಹೇಳಿದೆ.

ಮತ ಹ್ಯಾಕ್‌ ಸಾಧ್ಯತೆ: ಪ್ರಧಾನಿ ಆಯ್ಕೆಗಾಗಿ ನಡೆಯುವ ಆನ್‌ಲೈನ್‌ ಮತದಾನದ ವೇಳೆ ಮತಗಳನ್ನು ಹ್ಯಾಕ್‌ ಮಾಡುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಆನ್‌ಲೈನ್‌ ಮತದಾನವನ್ನು ಕೆಲದಿನಗಳ ಮಟ್ಟಿಗೆ ಮುಂದೂಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.