ADVERTISEMENT

ಕೋವಿಡ್‌: ವಿವೇಕ್‌ ಮೂರ್ತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕಮಲಾ ಹ್ಯಾರಿಸ್‌

ಪಿಟಿಐ
Published 2 ಏಪ್ರಿಲ್ 2021, 6:50 IST
Last Updated 2 ಏಪ್ರಿಲ್ 2021, 6:50 IST
ಕೋವಿಡ್‌ ಸಂಬಂಧಿತ ವರ್ಚುವಲ್‌ ಸಭೆಯಲ್ಲಿ ಭಾಗವಹಿಸಿದ ಸರ್ಜನ್‌ ಜನರಲ್‌ ವಿವೇಕ್‌ ಮೂರ್ತಿ ಮತ್ತು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌              
ಕೋವಿಡ್‌ ಸಂಬಂಧಿತ ವರ್ಚುವಲ್‌ ಸಭೆಯಲ್ಲಿ ಭಾಗವಹಿಸಿದ ಸರ್ಜನ್‌ ಜನರಲ್‌ ವಿವೇಕ್‌ ಮೂರ್ತಿ ಮತ್ತು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌                 

ವಾಷಿಂಗ್ಟನ್‌: ಕೊರೊನಾ ಸೋಂಕನ್ನು ನಿಯಂತ್ರಿಸಲು ಶ್ರಮಿಸುತ್ತಿರುವ ಸರ್ಜನ್‌ ಜನರಲ್‌ ಡಾ. ವಿವೇಕ್‌ ಮೂರ್ತಿ ಅವರನ್ನು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಶ್ಲಾಘಿಸಿದ್ದಾರೆ.

‘ನೀವು ಸದಾ ರಾಷ್ಟ್ರ ಮತ್ತು ವಿಜ್ಞಾನದ ಪ್ರಾಮುಖ್ಯತೆಯನ್ನು ಮೇಲೆತ್ತಲು ಪ್ರಯತ್ನಿಸಿದ್ದೀರಿ. ಅಲ್ಲದೆ ಈ ಪರಿಸ್ಥಿತಿಯಲ್ಲಿ ನಾವೆಲ್ಲರೂ ಒಟ್ಟಿಗೆ ಇದ್ದೇವೆ ಎಂಬುದನ್ನು ತಿಳಿಸಿಕೊಟ್ಟ ನಿಮಗೆ ಧನ್ಯವಾದಗಳು’ ಎಂದು ಅವರು ಹೇಳಿದರು.

‘ಕೋವಿಡ್‌–19: ಸಾರ್ವಜನಿಕ ಶಿಕ್ಷಣದ ಪ್ರಯತ್ನಗಳು’ ವಿಷಯ ಕುರಿತ ವರ್ಚುವಲ್ ಸಭೆಯಲ್ಲಿ ಹ್ಯಾರಿಸ್ ಮಾತನಾಡಿದರು.

ADVERTISEMENT

ಈ ವೇಳೆ ಕಮಲಾ ಹ್ಯಾರಿಸ್‌ ಕುರಿತಾಗಿ ಮಾತನಾಡಿದ ವಿವೇಕ್‌, ‘ನಮ್ಮ ದೇಶದ ಪ್ರಮುಖ ನಾಯಕರಲ್ಲಿ ಒಬ್ಬರನ್ನು ಪರಿಚಯಿಸಲು ಬಹಳ ಹೆಮ್ಮೆಯಾಗುತ್ತಿದೆ. ಇವರು ಎಲ್ಲಾ ಅಡೆತಡೆಗಳನ್ನು ಎದುರಿಸಿ, ಸಮುದಾಯವನ್ನು ಮೇಲೆತ್ತಿದ್ದಾರೆ. ಲಕ್ಷಾಂತರ ಜನರನ್ನು ಪ್ರೇರೇಪಿಸುವ ದಯಾಳು ಮತ್ತು ಬಲಶಾಲಿ ನಾಯಕಿ’ ಎಂದು ಅವರು ಹೇಳಿದರು.

‘ಸರ್ಜನ್‌ ಜನರಲ್‌ ಆಗಿ ದೇಶಕ್ಕೆ ಸೇವೆ ಸಲ್ಲಿಸಲು ನನಗೆ ಹೆಮ್ಮೆಯಾಗುತ್ತಿದೆ. ಈ ಸೋಂಕಿನಿಂದಾಗಿನಾವೆಲ್ಲರು ನಮ್ಮ ಆತ್ಮೀಯರನ್ನು ಕಳೆದುಕೊಂಡಿದ್ದೇವೆ. ಪ್ರತಿಯೊಂದು ಅಮೆರಿಕನ್ನರ ಆರೋಗ್ಯದ ಬಗ್ಗೆ ನಿಗಾವಹಿಸುವ ಜವಾಬ್ದಾರಿ ನನ್ನ ಮೇಲಿದೆ. ಇದನ್ನು ನಾನು ಪವಿತ್ರ ಜವಾಬ್ದಾರಿ ಎಂದು ಭಾವಿಸುತ್ತೇನೆ’ ಎಂದು ಅವರು ಅಭಿಪ್ರಾಯಪಟ್ಟರು.

ಕಳೆದ ವಾರ ಭಾರತ–ಅಮೆರಿಕನ್‌ ತಜ್ಞ ವೈದ್ಯ ವಿವೇಕ್‌ ಮೂರ್ತಿ ಅವರು ಜೋ ಬೈಡನ್‌ ಆಡಳಿತದಲ್ಲಿ ಸರ್ಜನ್‌ ಜನರಲ್‌ ಆಗಿ ಅಧಿಕಾರ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.