ADVERTISEMENT

ಅಫ್ಗಾನಿಸ್ತಾನದಲ್ಲಿ ಮಳೆ, ಪ್ರವಾಹ: 39 ಸಾವು

800 ಹೆಕ್ಟೇರ್‌ ಕೃಷಿ ಭೂಮಿಗೆ ಹಾನಿ 500 ಕುಟುಂಬಗಳಿಗೆ ಸಂಕಷ್ಟ

ಏಜೆನ್ಸೀಸ್
Published 13 ಜುಲೈ 2022, 13:28 IST
Last Updated 13 ಜುಲೈ 2022, 13:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್‌: ಅಫ್ಗಾನಿಸ್ತಾನದಲ್ಲಿ ಅಕಾಲಿಕ ಮಳೆ ಮತ್ತು ಪ್ರವಾಹದಿಂದ 9 ಮಂದಿ ಮಕ್ಕಳು ಸೇರಿ ಕನಿಷ್ಠ 39 ಮಂದಿ ಮೃತಪಟ್ಟು,14 ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಸೋಮವಾರ ತಿಳಿಸಿದೆ.

ತೀವ್ರ ಮಳೆಯ ಪರಿಣಾಮ ಹಲವೆಡೆ ಭೂಕುಸಿತ ಸಂಭವಿಸಿದೆ.ಕಳೆದ ಮೂರು ತಿಂಗಳಲ್ಲಿ ಈಶಾನ್ಯ ಭಾಗದಲ್ಲಿ ಮೂರನೇ ಬಾರಿ ಪ್ರವಾಹ ಉಂಟಾಗಿದೆ.

ತೀವ್ರ ಮಳೆಯಿಂದ ಈಶಾನ್ಯ ಭಾಗದ ನಂಗಾರ್‌ಹರ್‌ ಮತ್ತು ನುರಿಸ್ತಾನ್‌ನಲ್ಲಿ ಸುಮಾರು 500 ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ. 800 ಹೆಕ್ಟೇರ್‌ ಕೃಷಿ ಭೂಮಿ, 4 ಮಸೀದಿಗಳು, ಎರಡು ಕಾಲುವೆಗಳು, 5 ಸ್ಥಳೀಯ ಹಿಟ್ಟಿನ ಗಿರಣಿಗಳು ಮತ್ತು ಒಂದು ಸೇತುವೆ ಹಾನಿಗೊಳಗಾಗಿದೆ. 500 ಹಸುಗಳು ಮೃತಪಟ್ಟಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.