ADVERTISEMENT

ಅಫ್ಗಾನ್‌ ಪ್ರವಾಹ | 30 ಸಾವು, 40 ಮಂದಿ ನಾಪತ್ತೆ

ರಾಯಿಟರ್ಸ್‌
Published 23 ಜುಲೈ 2023, 14:17 IST
Last Updated 23 ಜುಲೈ 2023, 14:17 IST
ಪ್ರವಾಹ (ಪ್ರಾತಿನಿಧಿಕ ಚಿತ್ರ್ರ)
ಪ್ರವಾಹ (ಪ್ರಾತಿನಿಧಿಕ ಚಿತ್ರ್ರ)   

ಕಾಬೂಲ್‌ : ಅಫ್ಗಾನಿಸ್ತಾನದಲ್ಲಿ ಧಾರಾಕಾರ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ಸಿಲುಕಿ 30 ಜನರು ಮೃತಪಟ್ಟಿದ್ದು, ಅಂದಾಜು 40 ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿಪತ್ತು ಸಚಿವಾಲಯದ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. 

ಪೂರ್ವ ಕಾಬೂಲ್‌ನ ಜಲ್ರೆಜ್ ಜಿಲ್ಲೆಯಲ್ಲಿಯೇ 26 ಜನರು ಸಾವಿಗೀಡಾಗಿದ್ದರೆ, ಕಾಬೂಲ್‌ನಲ್ಲಿ ನಾಲ್ವರು ಮೃತಪಟ್ಟಿದ್ದಾರೆ. 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನೂರಾರು ಮನೆಗಳು ಕೊಚ್ಚಿಹೋಗಿವೆ ಎಂದು ಸಚಿವಾಲಯದ ವಕ್ತಾರ ಮೊಹಮ್ಮದ್ ಶಫಿ ರಹೀಂ ಹೇಳಿದ್ದಾರೆ.

‌ನೂರಾರು ಎಕರೆ ಕೃಷಿ ಭೂಮಿ ಕೊಚ್ಚಿ ಹೋಗಿದೆ. ನೂರಾರು ಮನೆಗಳಿಗೆ ಹಾನಿಯಾಗಿದೆ. ನಾಪತ್ತೆ ಆಗಿರುವವರು ಆವಶೇಷಗಳ ಅಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಪ್ರಾಂತೀಯ ಗವರ್ನರ್‌ ಕಚೇರಿ ಹೇಳಿಕೆ  ತಿಳಿಸಿವೆ.

ADVERTISEMENT

ಕಾಬೂಲ್ ಆಡಳಿತ ಸಂತ್ರಸ್ತ ಕುಟುಂಬಗಳಿಗೆ ನೆರವಿಗೆ ಧಾವಿಸಲಿದೆ ಎಂದು ತಾಲಿಬಾನ್‌ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.