ADVERTISEMENT

ಪಾಕಿಸ್ತಾನ: ಭಾರಿ ಮಳೆ, ಹಿಮಪಾತ: 14 ಮಂದಿ ಸಾವು

ಪಿಟಿಐ
Published 13 ಜನವರಿ 2020, 19:14 IST
Last Updated 13 ಜನವರಿ 2020, 19:14 IST

ಇಸ್ಲಾಮಾಬಾದ್‌ :ಭಾರಿ ಹಿಮಪಾತ ಮತ್ತು ಮಳೆಯಿಂದಾಗಿ ಬಲೂಚಿಸ್ತಾನದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 14 ಮಂದಿ ಮೃರಪಟ್ಟಿದ್ದಾರೆ.

ಮಳೆಯಿಂದ ಸಂಭವಿಸಿದ ಅವಘಡಗಳಲ್ಲಿ ಹಲವರು ಗಾಯಗೊಂಡಿದ್ದಾರೆ. ಪ್ರತಿಕೂಲ ಹವಾಮಾನದಿಂದಾಗಿ ಸಂಚಾರ ಅಸ್ತವ್ಯಸ್ತವಾಗಿದ್ದು, ವಿಮಾನಗಳ ಹಾರಾಟಕ್ಕೂ ತೊಂದರೆಯಾಗಿದೆ.

ಕ್ವೆಟ್ಟಾದಲ್ಲಿ ನಿರಂತರವಾಗಿ ಹಿಮಪಾತವಾಗುತ್ತಿದ್ದು, ಹಲವು ಮನೆಗಳು ನೆಲಸಮವಾಗಿವೆ. ಜೋಬ್‌ ಜಿಲ್ಲೆಯಲ್ಲಿ ಮನೆಯ ಮೇಲ್ಛಾವಣಿ ಕುಸಿದು ಮೂರು ಮಹಿಳೆಯರು ಸೇರಿದಂತೆ ಮಕ್ಕಳು ಮೃತಪಟ್ಟಿದ್ದಾರೆ. 20 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಹಿಮಪಾತವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ADVERTISEMENT

ಪಾಕಿಸ್ತಾನ-ಇರಾನ್ ಗಡಿಯ ಸಮೀಪವಿರುವ ಕಾಚಾರ್ ಪ್ರದೇಶದಲ್ಲಿ ಹಲವರು ಹಿಮಪಾತಕ್ಕೆ ಸಿಲುಕಿದ್ದು, ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ಗಡಿಯಲ್ಲಿರುವ ಚಮನ್‌ ನಗರದಲ್ಲಿ ಮನೆ ಕುಸಿದ ಪರಿಣಾಮ ಒಂದೇ ಕುಟುಂಬದ ಐವರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.