ADVERTISEMENT

ಹಿಂದೂ ಅಮೆರಿಕನ್‌ ಸಮುದಾಯದಿಂದ ಬಡವರಿಗೆ 1.33 ಲಕ್ಷ ಕೆ.ಜಿ ಆಹಾರ ವಿತರಣೆ

ಪಿಟಿಐ
Published 15 ಡಿಸೆಂಬರ್ 2020, 6:45 IST
Last Updated 15 ಡಿಸೆಂಬರ್ 2020, 6:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಹಿಂದೂ ಅಮೆರಿಕನ್‌ ಸಮುದಾಯವು ‘ಸೇವಾ ದೀಪಾವಳಿ’ ಅಭಿಯಾನದಡಿ ಬಡವರು ಮತ್ತು ಅಗತ್ಯವಿರುವವರಿಗೆ 1.33 ಲಕ್ಷ ಕೆ.ಜಿಯಷ್ಟು ಆಹಾರ, ಧಾನ್ಯಗಳನ್ನು ವಿತರಿಸಿದೆ.

ಯೋಗ ಸಂಸ್ಥೆಗಳು, ಸಾಂಸ್ಕೃತಿಕ ಮತ್ತು ಧಾರ್ಮಿಕ ಸಮುದಾಯಗಳು ಸೇರಿದಂತೆ ಹಲವು ಸಂಸ್ಥೆಗಳು ಒಗ್ಗೂಡಿ ಈ ಅಭಿಯಾನ ನಡೆಸಿವೆ. ಅಮೆರಿಕದಾದ್ಯಂತ 179 ಸಂಸ್ಥೆಗಳು ಹಾಗೂ ಹಲವಾರು ಜನರು ಆಹಾರ, ಧಾನ್ಯಗಳನ್ನು ಸ್ವೀಕರಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

‘ಸೇವಾ ದೀ‍ಪಾವಳಿ’ ಅಭಿಯಾನದಡಿ 26 ರಾಜ್ಯಗಳ 225 ನಗರಗಳಿಂದ 1.33 ಲಕ್ಷ ಕೆ.ಜಿ (2.94 ಪೌಂಡ್‌) ಆಹಾರವನ್ನು ಸಂಗ್ರಹಿಸಿ, ಅಗತ್ಯ ಇರುವವರಿಗೆ ವಿತರಿಸಲಾಯಿತು. ನೆರೆಹೊರೆಯವರಿಂದ ಆಹಾರ ಸಂಗ್ರಹಿಸಲು ನೂರಾರು ಜನರು ತಮ್ಮ ಮನೆಯನ್ನೇ ‘ಸಂಗ್ರಹ ಕೇಂದ್ರ’ವನ್ನಾಗಿ ಬಳಸಿದರು ಎಂದು ಪ್ರಕಟಣೆ ಹೇಳಿದೆ.

ADVERTISEMENT

‘ಇದು ಎರಡು ತಿಂಗಳ ಕಾರ್ಯಕ್ರಮವಾಗಿದ್ದು, ಉಳ್ಳವರಿಂದ ಆಹಾರ ಸಂಗ್ರಹಿಸಿ, ಬಡವರಿಗೆ ವಿತರಣೆ ಮಾಡುವ ಯೋಜನೆಯಾಗಿದೆ’ ಎಂದು ಚಿನ್ಮಯ ಮಿಷನ್‌ನಕನೆಕ್ಟಿಕಟ್‌ ಘಟಕದ ಅಧ್ಯಕ್ಷ ವೆಂಕಟ್ ಗಡೆ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.