ADVERTISEMENT

ಆಸ್ಟ್ರೇಲಿಯಾ: ಹಿಂದೂ ದೇವಾಲಯದಲ್ಲಿ ಜನಾಂಗೀಯವಾದಿ ಬರಹ

ಪಿಟಿಐ
Published 24 ಜುಲೈ 2025, 15:24 IST
Last Updated 24 ಜುಲೈ 2025, 15:24 IST
_
_   

ಮೆಲ್ಬೋರ್ನ್‌: ಹಿಂದೂ ದೇವಾಲಯ ಮತ್ತು ಏಷ್ಯಾ ಮೂಲದ ಎರಡು ರೆಸ್ಟೋರೆಂಟ್‌ಗಳನ್ನು ವಿರೂಪಗೊಳಿಸಿ, ಅವಹೇಳನಕಾರಿಯಾಗಿ ಗೀಚುಬರಹ ಬರೆದಿರುವ ಘಟನೆ ಮೆಲ್ಬರ್ನ್‌ನಲ್ಲಿ ನಡೆದಿದೆ ಎಂದು ಮಾಧ್ಯಮವೊಂದು ಗುರುವಾರ ವರದಿ ಮಾಡಿದೆ‌. ಈ ಘಟನೆಯು ಆಸ್ಟ್ರೇಲಿಯಾದಲ್ಲಿರುವ ಸಮುದಾಯದ ಜನರಲ್ಲಿ ಆತಂಕ ಹುಟ್ಟುಹಾಕಿದೆ.

ಬೊರೋನಿಯಾದ ವಾಧರ್ಸ್ಟ್‌ ಡ್ರೈವ್‌ನಲ್ಲಿರುವ ಶ್ರೀ ಸ್ವಾಮಿನಾರಾಯಣ ದೇವಾಲಯದ ಮೇಲೆ ಕೆಂಪು ಬಣ್ಣದಲ್ಲಿ ಅವಹೇಳನಕಾರಿ ಬರಹಗಳನ್ನು ಬರೆಯಲಾಗಿತ್ತು. ಜೊತೆಗೆ ಅದೇ ಬರಹವನ್ನು ಅದೇ ದಿನ ಎರಡು ರೆಸ್ಟೋರೆಂಟ್‌ಗಳ ಮೇಲೆಯೂ ಬರೆಯಲಾಗಿತ್ತು ಎಂದು ವರದಿ ಹೇಳಿದೆ.  

‘ಇದು ನಮ್ಮ ಅಸ್ಮಿತೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಆಚರಣೆ ಮೇಲಿನ ದಾಳಿ’ ಎಂದು ಆಸ್ಟ್ರೇಲಿಯಾ ಹಿಂದೂ ಕೌನ್ಸಿಲ್‌ನ ಮಕ್ರಂದ್ ಭಾಗ್ವತ್ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.