ADVERTISEMENT

ಬಾಂಗ್ಲಾದಲ್ಲಿರುವ ಹಿಂದೂಗಳು ಸಿಎಎ ಬಗ್ಗೆ ಉತ್ಸಾಹ ಹೊಂದಿಲ್ಲ: ಸಮುದಾಯದ ಮುಖಂಡ

ಪಿಟಿಐ
Published 11 ಜೂನ್ 2022, 13:54 IST
Last Updated 11 ಜೂನ್ 2022, 13:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಢಾಕಾ: ನಮಗೆ ಭಾರತದ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯ ಅಗತ್ಯವಿಲ್ಲ. ಇದು ನಮ್ಮ ದೇಶ ಮತ್ತು ನಾವು ಇಲ್ಲೇ ನೆಲೆಸುವ ಮೂಲಕ ನಮ್ಮ ಹಕ್ಕುಗಳನ್ನು ಪಡೆಯುತ್ತೇವೆ ಎಂದು ಬಾಂಗ್ಲಾದೇಶದ ಹಿಂದೂ ಸಮುದಾಯದ ಮುಖಂಡ, ಮಹಾನಗರ ಸರ್ವಜನ ಪೂಜಾ ಸಮಿತಿಯ ಅಧ್ಯಕ್ಷ ಮೋನಿಂದರ್‌‌ ಕುಮಾರನಾಥ್‌ ತಿಳಿಸಿದ್ದಾರೆ.

ನೆರೆಯ ರಾಷ್ಟ್ರಗಳಲ್ಲಿರುವ ಹಿಂದೂಗಳಿಗೆ ಭಾರತದ ನಾಗರಿಕತ್ವವನ್ನು ನೀಡುವ ಕಾಯ್ದೆ ಸಿಎಎ ಬಗ್ಗೆ ಶನಿವಾರ ಮಾತನಾಡಿದ ಮೋನಿಂದರ್‌, ಇದರಿಂದ ಹೆಚ್ಚಿನ ಸಹಾಯವಾಗಲಿದೆ ಎಂಬ ನಿರೀಕ್ಷೆಗಳಿಲ್ಲ. ಬಾಂಗ್ಲಾದೇಶದಲ್ಲಿರುವ ಹಿಂದೂಗಳು ಅವರದ್ದೇ ಆದ ಸವಾಲುಗಳನ್ನು ಹೊಂದಿದ್ದಾರೆ. ನಮ್ಮ ಸಮುದಾಯಕ್ಕೆ ಆಗಬೇಕಿರುವುದು ಸಾಕಷ್ಟಿದೆ ಎಂದಿದ್ದಾರೆ.

ಬಾಂಗ್ಲಾದೇಶದಲ್ಲಿರುವ ಹಿಂದೂ ಮತ್ತು ಇತರ ಅಲ್ಪಸಂಖ್ಯಾತರ ಸಮುದಾಯದವರು ಪ್ರಧಾನಿ ಶೇಕ್‌ ಹಸಿನಾ ಅವರ ಆಡಳಿತದಲ್ಲಿ ಸುರಕ್ಷಿತವಾಗಿದ್ದಾರೆ. ಆದರೆ ಅತ್ಪಸಂಖ್ಯಾತರ ಹಿತದೃಷ್ಟಿಯಿಂದ ಇನ್ನೂ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಮೋನಿಂದರ್‌ ತಿಳಿಸಿದ್ದಾರೆ.

ಹಸಿನಾ ಸರ್ಕಾರ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಂದ ಅಲ್ಪಸಂಖ್ಯಾತರ ಬದುಕು ಸುಧಾರಣೆಗೊಂಡಿದೆ. ಕಳೆದ 12 ವರ್ಷಗಳಲ್ಲಿ ದೇಶದಲ್ಲಿ ದುರ್ಗಾ ಪೂಜಾ ಮಂಟಪಗಳ ಸಂಖ್ಯೆ 15,000 ಹೆಚ್ಚಾಗಿದ್ದು, ಒಟ್ಟು ಸಂಖ್ಯೆ ಸುಮಾರು 30,000ಕ್ಕೆ ತಲುಪಿದೆ. ಢಾಕೇಶ್ವರಿ ದೇವಸ್ಥಾನಕ್ಕೆ 1.5 ಎಕರೆ ಭೂಮಿ ವಾಪಾಸ್‌ ಸಿಕ್ಕಿದೆ ಎಂದು ಮೋನಿಂದರ್‌ ಹೇಳಿದ್ದಾರೆ.

ADVERTISEMENT

ಪ್ರತ್ಯೇಕ ಅಲ್ಪಸಂಖ್ಯಾತ ಸಚಿವಾಲಯ ಮತ್ತು ಅಲ್ಪಸಂಖ್ಯಾತ ಕಮಿಷನ್‌ ಹೊಂದುವುದು ನಮ್ಮ ಬೇಡಿಕೆಯಾಗಿದೆ. ನಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತೇವೆ. ಎಂದರು.

ಮಹಾನಗರ ಸರ್ವಜನ ಪೂಜಾ ಸಮಿತಿಯು ದೇಶದಲ್ಲಿ ದುರ್ಗಾ ಪೂಜಾ ಆಚರಣೆಗಳನ್ನು ನಡೆಸಲು ಅವಕಾಶ ಮಾಡಿಕೊಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.