ADVERTISEMENT

ಹಾಂಗ್‌ಕಾಂಗ್‌: ಕೋವಿಡ್‌ ನಿಯಂತ್ರಣಕ್ಕೆ ಕಠಿಣ ನಿರ್ಬಂಧ

ರಾಯಿಟರ್ಸ್
Published 21 ಫೆಬ್ರುವರಿ 2022, 13:57 IST
Last Updated 21 ಫೆಬ್ರುವರಿ 2022, 13:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾಂಗ್‌ಕಾಂಗ್‌ (ರಾಯಿಟರ್ಸ್‌): ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದೇ 24ರಿಂದ ಸೂ‍ಪರ್ ಮಾರ್ಕೆಟ್‌, ಕ್ಲಬ್‌ಹೌಸ್‌ ಸೇರಿದಂತೆ ನಗರದ ವಿವಿಧ ಸ್ಥಳಗಳಿಗೆ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ ಕಲ್ಪಿಸುವ ’ವ್ಯಾಕ್ಸಿನ್‌ ಪಾಸ್‌ಪೋರ್ಟ್‌‘ ಅನ್ನು ಸರ್ಕಾರ ಜಾರಿಗೊಳಿಸಿದೆ.

ನಿಗದಿತ ಸ್ಥಳಗಳಿಗೆ 12 ವರ್ಷಮೇಲ್ಪಟ್ಟವರು ಪ್ರವೇಶ ಪಡೆಯಬೇಕಾದರೆ ಕನಿಷ್ಠ ಒಂದು ಡೋಸ್‌ ಲಸಿಕೆ ಪಡೆದಿರಬೇಕು. ಲಸಿಕೆ ಪಾಸ್‌ಪೋರ್ಟ್ ಅಥವಾ ಪ್ರಮಾಣ ಪತ್ರವನ್ನುತಗೆದುಕೊಂಡು ಹೋಗಬೇಕು ಎಂದು ಆಹಾರ ಮತ್ತು ಆರೋಗ್ಯ ಇಲಾಖೆಯ ಉಪ ಕಾರ್ಯದರ್ಶಿ ಕೆವಿನ್‌ ಚೋಯ್‌ ತಿಳಿಸಿದ್ದಾರೆ.

ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳನ್ನು ನಿಯಂತ್ರಿಸುವ ಭಾಗವಾಗಿ ಸರ್ಕಾರ ಶಾಪಿಂಗ್‌ ಮಾಲ್‌, ಸೂಪರ್‌ ಮಾರ್ಕೆಟ್‌ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಲಸಿಕೆ ಹಾಕುವುದನ್ನು ವಿಸ್ತರಿಸಿದೆ.

ADVERTISEMENT

ಹಾಂಗ್‌ಕಾಂಗ್‌ನಲ್ಲಿ ಹೊಸದಾಗಿ 7,533 ಮಂದಿಗೆ ಸೋಂಕು ದೃಢಪಟ್ಟಿದ್ದು, 13 ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.