ADVERTISEMENT

ಪೊಲೀಸ್ ಮುಖ್ಯ ಕಚೇರಿಗೆ ಮುತ್ತಿಗೆ

ಏಜೆನ್ಸೀಸ್
Published 22 ಜೂನ್ 2019, 20:00 IST
Last Updated 22 ಜೂನ್ 2019, 20:00 IST
ಪೊಲೀಸ್‌ ಮುಖ್ಯಕಚೇರಿಗೆ ಪ್ರತಿಭಟನಕಾರರು ಎಸೆದ ಮೊಟ್ಟೆಗಳನ್ನು ಸ್ವಚ್ಛ ಮಾಡುತ್ತಿರುವ ಸಿಬ್ಬಂದಿ –ರಾಯಿಟರ್ಸ್‌ ಚಿತ್ರ
ಪೊಲೀಸ್‌ ಮುಖ್ಯಕಚೇರಿಗೆ ಪ್ರತಿಭಟನಕಾರರು ಎಸೆದ ಮೊಟ್ಟೆಗಳನ್ನು ಸ್ವಚ್ಛ ಮಾಡುತ್ತಿರುವ ಸಿಬ್ಬಂದಿ –ರಾಯಿಟರ್ಸ್‌ ಚಿತ್ರ   

ಹಾಂಗ್‌ಕಾಂಗ್‌: ಸರ್ಕಾರಿ ವಿರೋಧಿ ಪ್ರತಿಭಟನೆ ಶನಿವಾರವೂ ಮುಂದುವರಿದಿದ್ದು, ಇಲ್ಲಿನ ಪೊಲೀಸ್‌ ಮುಖ್ಯ ಕಚೇರಿಗೆ ಪ್ರತಿಭಟನಕಾರರು ಮುತ್ತಿಗೆ ಹಾಕಿದರು. ಇದು ಕಾನೂನು ಬಾಹಿರ ಹಾಗೂ ವಿಚಾರರಹಿತ ಎಂದುಶನಿವಾರ ಪೊಲೀಸರು ಹೇಳಿದ್ದಾರೆ.

ಪ್ರತಿಭಟನಕಾರರು ಪೊಲೀಸ್‌ ಕಚೇರಿಯ ಮೇಲೆ ಮೊಟ್ಟೆಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು.

ಹಾಂಗ್‌ಕಾಂಗ್‌ ಸಂಸತ್ತಿನ ಎದುರು ನಡೆದ ಬೃಹತ್‌ ಪ್ರತಿಭಟನೆ ವೇಳೆ ಪ್ರತಿಭಟನಕಾರರ ಮೇಲೆ ಪೊಲೀಸರು ಅಶ್ರುವಾಯು ಹಾಗೂ ರಬ್ಬರ್ ಗುಂಡುಗಳು ಹಾರಿಸಿದ್ದರು. ಈ ಕ್ರಮಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.