ADVERTISEMENT

ಹಾಂಗ್ ಕಾಂಗ್‌ನಲ್ಲಿ ತೀವ್ರಗೊಂಡ ಪ್ರತಿಭಟನೆ

ಏಜೆನ್ಸೀಸ್
Published 27 ಜುಲೈ 2019, 19:55 IST
Last Updated 27 ಜುಲೈ 2019, 19:55 IST
ಹಾಂಗ್‌ಕಾಂಗ್‌ನ ಗಡಿ ಪ್ರದೇಶ ಯುಯೆನ್ ಲಾಂಗ್‌ ಪಟ್ಟಣದಲ್ಲಿ ಶನಿವಾರ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ನಡೆದ ಸಂಘರ್ಷದಲ್ಲಿ ಪೊಲೀಸರು ಅಶ್ರುವಾಯು ಪ್ರಯೋಗಿಸಿದರು (ಎಎಫ್‌ಪಿ ಚಿತ್ರ)
ಹಾಂಗ್‌ಕಾಂಗ್‌ನ ಗಡಿ ಪ್ರದೇಶ ಯುಯೆನ್ ಲಾಂಗ್‌ ಪಟ್ಟಣದಲ್ಲಿ ಶನಿವಾರ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ನಡೆದ ಸಂಘರ್ಷದಲ್ಲಿ ಪೊಲೀಸರು ಅಶ್ರುವಾಯು ಪ್ರಯೋಗಿಸಿದರು (ಎಎಫ್‌ಪಿ ಚಿತ್ರ)   

ಹಾಂಗ್‌ಕಾಂಗ್ : ಶಂಕಿತ ಅಪರಾಧಿಗಳನ್ನು ವಿಚಾರಣೆಗಾಗಿ ಚೀನಾಕ್ಕೆ ಕಳಿಸಲು ಅನುವು ಮಾಡಿಕೊಡಲು ಕಾನೂನು ತಿದ್ದುಪಡಿಯನ್ನು ವಿರೋಧಿಸಿ ಹಾಂಗ್ ಕಾಂಗ್‌ನಲ್ಲಿ ಭುಗಿಲೆದ್ದಿರುವ ಪ್ರತಿಭಟನೆ ಶನಿವಾರ ಮತ್ತಷ್ಟು ತೀವ್ರಗೊಂಡಿತು.

ಹಾಂಗ್‌ಕಾಂಗ್‌ನ ಗಡಿ ಪ್ರದೇಶದಲ್ಲಿರುವ ಯುಯೆನ್ ಲಾಂಗ್ ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಿರತರ ಮೇಲೆ ಪೊಲೀಸರು ಅಶ್ರುವಾಯು ಸಿಡಿಸಿ, ಪ್ರತಿಭಟನೆ ಹತ್ತಿಕ್ಕಲು ಪ್ರಯತ್ನಿಸಿದರು.

ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಘರ್ಷಣೆ ಪರಿಣಾಮ, ಕೆಲ ಪ್ರತಿಭಟನಕಾರರು ಪೊಲೀಸರತ್ತ ಸ್ಫೋಟಕಗಳನ್ನು ಎಸೆದ ಘಟನೆಯೂ ನಡೆಯಿತು. ಈ ಘಟನೆಯಲ್ಲಿ 45 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ADVERTISEMENT

ಶನಿವಾರ ಪ್ರತಿಭಟನಾ ರ‍್ಯಾಲಿ ಶಾಂತಿಯುತವಾಗಿಯೇ ಆರಂಭವಾಗಿತ್ತು. ಆದರೆ, ಪೊಲೀಸರು ಮಧ್ಯಪ್ರವೇಶಿಸಿದಾಗ ಪ್ರತಿಭಟನಕಾರರ ಗುಂಪು ತಿರುಗಿಬಿದ್ದಿತು. ಮುಖಕವಚ, ಹೆಲ್ಮೆಟ್ ತೊಟ್ಟಿದ್ದ ಪ್ರತಿಭಟನಕಾರರು, ಅಶ್ರುವಾಯುಗೆ ಪ್ರತಿರೋಧವಾಗಿ ದೊಡ್ಡ ಕೊಡೆಗಳ ಮೊರೆ ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.