ADVERTISEMENT

ಟೆಕ್ಸಾಸ್‌ ಒತ್ತೆ ಪ್ರಕರಣ ಅಂತ್ಯ: ದುಷ್ಕರ್ಮಿ ಹತ

ಏಜೆನ್ಸೀಸ್
Published 16 ಜನವರಿ 2022, 19:41 IST
Last Updated 16 ಜನವರಿ 2022, 19:41 IST
ಟೆಕ್ಸಾಸ್‌ನ ಕಾಲಿವಿಲ್ಲೆಯಲ್ಲಿರುವ ಯಹೂದಿ ಮಂದಿರದ ಬೆತ್ ಇಸ್ರೇಲ್ ಸಭೆಯಿಂದ ಅಧಿಕಾರಿಗಳು ಶನಿವಾರ ಒತ್ತೆಯಾಳನ್ನು ಪಾರು ಮಾಡಿದರು. ಎಪಿ ಚಿತ್ರ
ಟೆಕ್ಸಾಸ್‌ನ ಕಾಲಿವಿಲ್ಲೆಯಲ್ಲಿರುವ ಯಹೂದಿ ಮಂದಿರದ ಬೆತ್ ಇಸ್ರೇಲ್ ಸಭೆಯಿಂದ ಅಧಿಕಾರಿಗಳು ಶನಿವಾರ ಒತ್ತೆಯಾಳನ್ನು ಪಾರು ಮಾಡಿದರು. ಎಪಿ ಚಿತ್ರ   

ಕಾಲಿವಿಲ್ಲೆ, ಅಮೆರಿಕ: ಟೆಕ್ಸಾಸ್‌ನ ಯಹೂದಿ ಮಂದಿರದಲ್ಲಿ ನಡೆದ ಒತ್ತೆಯಾಳು ಪ್ರಕರಣವು ಭಾನುವಾರ ಸುಖಾಂತ್ಯ ಕಂಡಿದ್ದು, ಒತ್ತೆಯಾಳುಗಳಾಗಿದ್ದ ನಾಲ್ವರು ಸುರಕ್ಷಿತವಾಗಿದ್ದಾರೆ ಹಾಗೂ ಒತ್ತೆ ಇಟ್ಟಿದ್ದ ದುಷ್ಕರ್ಮಿಯನ್ನು ಹತ್ಯೆ ಮಾಡಲಾಗಿದೆ.‌

ಅಫ್ಗಾನಿಸ್ತಾನದಲ್ಲಿ ಅಮೆರಿಕ ಸೇನಾಧಿಕಾರಿಗಳನ್ನು ಕೊಲ್ಲಲು ಯತ್ನಿಸಿದ ಪಾಕಿಸ್ತಾನದ ನರವಿಜ್ಞಾನಿಯನ್ನು ಬಿಡುಗಡೆ ಮಾಡುವಂತೆ ಬೇಡಿಕೆ ಇಟ್ಟಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒತ್ತೆ ಘಟನೆಗೆ ಸಂಬಂಧಿಸಿದಂತೆ ಡಲ್ಲಾಸ್‌ ವಾಹಿನಿ ಡಬ್ಲ್ಯುಎಫ್‌ಎಎ ವಿಡಿಯೊ ಬಿಡುಗಡೆ ಮಾಡಿದೆ. ದುಷ್ಕರ್ಮಿ ಬಿಡುಗಡೆಗೆ ಒತ್ತಾಯಿಸಿರುವ ಪಾಕಿಸ್ತಾನದ ಈ ಮಹಿಳಾ ವಿಜ್ಞಾನಿ ಸದ್ಯ ಅಮೆರಿಕದಲ್ಲೇ ಬಂಧನದಲ್ಲಿದ್ದಾಳೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.