ADVERTISEMENT

ನ್ಯೂಯಾರ್ಕ್‌: ಎರಡು ಬೃಹತ್‌ ಸಾರಿಗೆ ಯೋಜನೆಗೆ ನಿಧಿ ತಡೆಹಿಡಿದ ಟ್ರಂಪ್ ಆಡಳಿತ

ಏಜೆನ್ಸೀಸ್
Published 2 ಅಕ್ಟೋಬರ್ 2025, 2:32 IST
Last Updated 2 ಅಕ್ಟೋಬರ್ 2025, 2:32 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ವಾಷಿಂಗ್ಟನ್‌: ನ್ಯೂಯಾರ್ಕ್‌ನ ಎರಡು ಬೃಹತ್‌ ಸಾರಿಗೆ ಮೂಲಸೌಕರ್ಯ ಯೋಜನೆಗೆ ಮೀಸಲಿಟ್ಟ ಸುಮಾರು ₹18 ಬಿಲಿಯನ್‌ ಅಮೆರಿಕನ್‌ ಡಾಲರ್‌ ಹಣವನ್ನು ಟ್ರಂಪ್‌ ಸರ್ಕಾರ ಬುಧವಾರ ತಡೆಹಿಡಿದಿದೆ.

ನ್ಯೂಯಾರ್ಕ್‌ ನಗರ ಮತ್ತು ನ್ಯೂಜೆರ್ಸಿ ನಡುವೆ ಹಡ್ಸನ್‌ ನದಿಯ ಕೆಳಗೆ ಹೊಸ ರೈಲು ಸುರಂಗ ಮಾರ್ಗ ಮತ್ತು ನಗರದ ಎರಡನೇ ಅವೆನ್ಯೂ ಸಬ್‌ವೇ ವಿಸ್ತರಣೆಗೆ ಈ ಹಣವನ್ನು ಬಿಡುಗಡೆ ಮಾಡಲಾಗಿತ್ತು.

‘ನನ್ನನ್ನು ಗುರಿಯಾಗಿಸಿಕೊಂಡು ಹಣವನ್ನು ತಡೆಹಿಡಿಯಲಾಗಿದೆ’ ಎಂದು ನ್ಯೂಯಾರ್ಕ್‌ನ ಸೆನೆಟರ್‌ ಡೆಮಾಕ್ರಟಿಕ್ ನಾಯಕ ಚಕ್ ಶುಮರ್ ಆರೋಪಿಸಿದ್ದಾರೆ. ‘ಹಣದ ಸ್ಥಗಿತವು ಪ್ರಯಾಣಿಕರ ಮೇಲೆ ಪರಿಣಾಮ ಬೀರಲಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಈ ಯೋಜನೆಗಳನ್ನು ತಡೆಯುವುದು ಮೂರ್ಖತನವಾಗಿದೆ. ಇದು ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಪ್ರಾದೇಶಿಕ ಮತ್ತು ರಾಷ್ಟ್ರೀಯ ಆರ್ಥಿಕತೆಗೆ ಸಹಕಾರಿಯಾಗಿದೆ’ ಎಂದು ಅವರು ಎಕ್ಸ್‌ನಲ್ಲಿ ಹೇಳಿದ್ದಾರೆ.

ರಾಜಕೀಯ ಮತ್ತು ಆರ್ಥಿಕ ಕಾರಣಗಳಿಂದ ಹಡ್ಸನ್‌ ನದಿ ರೈಲು ಸುರಂಗ ಮಾರ್ಗವು ಬಹಳ ಹಿಂದಿನಿಂದಲೂ ವಿಳಂಬವಾಗುತ್ತಿದೆ. ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯನ್ನು ಸಂಪರ್ಕಿಸುವ 110 ವರ್ಷಗಳಿಗೂ ಹಳೆಯದಾದ ಸುರಂಗ ಮಾರ್ಗದ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.