ADVERTISEMENT

ಚೀನಾ: ಕೋವಿಡ್ ಲಾಕ್‌ಡೌನ್‌ ವಿರುದ್ಧ ಜನಾಕ್ರೋಶ

ರಾಯಿಟರ್ಸ್
Published 26 ನವೆಂಬರ್ 2022, 12:33 IST
Last Updated 26 ನವೆಂಬರ್ 2022, 12:33 IST
ಬೀಜಿಂಗ್‌ನಲ್ಲಿ ಲಾಕ್‌ಡೌನ್‌ ಘೋಷಿಸಿರುವ ಪ್ರದೇಶವೊಂದರಲ್ಲಿ ಭದ್ರತಾ ಸಿಬ್ಬಂದಿ ಪಿಪಿಇ ಕಿಟ್‌ ಧರಿಸಿ ಕರ್ತವ್ಯ ನಿರತರಾಗಿರುವುದು –ಎಎಫ್‌ಪಿ ಚಿತ್ರ
ಬೀಜಿಂಗ್‌ನಲ್ಲಿ ಲಾಕ್‌ಡೌನ್‌ ಘೋಷಿಸಿರುವ ಪ್ರದೇಶವೊಂದರಲ್ಲಿ ಭದ್ರತಾ ಸಿಬ್ಬಂದಿ ಪಿಪಿಇ ಕಿಟ್‌ ಧರಿಸಿ ಕರ್ತವ್ಯ ನಿರತರಾಗಿರುವುದು –ಎಎಫ್‌ಪಿ ಚಿತ್ರ   

ಬೀಜಿಂಗ್‌: ಚೀನಾದಲ್ಲಿ ಕೋವಿಡ್‌ ಪ್ರಕರಣಗಳು ಏರುತ್ತಿದ್ದಂತೆಯೇ, ಲಾಕ್‌ಡೌನ್‌ ಕ್ರಮ ವಿರುದ್ಧ ಜನರ ಪ್ರತಿಭಟನೆಯೂ ತೀವ್ರಗೊಂಡಿದೆ. ಚೀನಾದ ಷಿನ್‌ಜಿಯಾಂಗ್ ವಲಯದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ನಾಗರಿಕರು ‘ಲಾಕ್‌ಡೌನ್‌ ಅಂತ್ಯಗೊಳಿಸಿ’ ಎಂಬ ಘೋಷಣೆ ಕೂಗುತ್ತಾ ಪ್ರತಿಭಟಿಸಿದರು.

ಗಾಳಿಯಲ್ಲಿ ಮುಷ್ಠಿ ಬೀಸುತ್ತಾ, ರಾಷ್ಟ್ರಗೀತೆಯನ್ನು ಹಾಡುತ್ತಾ ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತ ವಿಡಿಯೊಗಳು ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತಿವೆ. ವಿವಿಧೆಡೆ ವಿಧಿಸಿರುವ ಲಾಕ್‌ ಡೌನ ನಿರ್ಬಂಧದಿಂದ ನಮಗೆ ಮುಕ್ತಿ ನೀಡಿ ಎಂದು ಆಗ್ರಹಪಡಿಸಿದ್ದಾರೆ.

ಷಿನ್‌ಪಿಯಾಂಗ್ ವಲಯದಲ್ಲಿ ಸುಮಾರು 40 ಲಕ್ಷ ಜನಸಂಖ್ಯೆಯಷ್ಟು ಉರುಂಕ್ವಿ ಸಮುದಾಯದವರಿದ್ದಾರೆ. 100 ದಿನಗಳಿಂದ ನಿರ್ಬಂಧ ವಿಧಿಸಿದ್ದು, ಜನರಿಗೆ ಮನೆಯಿಂದ ಹೊರಬರದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅದರೆ, ಕಠಿಣ ನಿರ್ಬಂಧ ಹೇರಲಾಗಿದೆ ಎಂಬುದನ್ನು ಚೀನಾ ಆಡಳಿತ ನಿರಾಕರಿಸಿದೆ.

ADVERTISEMENT

ಪ್ರಕರಣಗಳ ಹೇರಿಕೆ: ಚೀನಾದಲ್ಲಿ ಶನಿವಾರ ಹೊಸದಾಗಿ 34,909 ಪ್ರಕರಣಗಳು ದಾಖಲಾಗಿವೆ. ದಿನೇ ದಿನೇ ಪ್ರಕರಣಗಳು ಏರುತ್ತಿವೆ. ವಿವಿಧ ನಗರಗಳಲ್ಲಿ ಸೋಂಕು ಪ್ರಕರಣಗಳು ವ್ಯಾಪಿಸುತ್ತಿವೆ. ಮುಂಜಾಗ್ರತೆಯಾಗಿ ಲಾಕ್‌ಡೌನ್‌ ಸೇರಿದಂತೆ ಕಠಿಣ ನಿರ್ಬಂಧ ಹೇರಲಾಗುತ್ತಿದ್ದು, ತಾತ್ಕಾಲಿಕ ಆಸ್ಪತ್ರೆ ಸ್ಥಾಪನೆಗೂ ಸರ್ಕಾರ ಒತ್ತು ನೀಡಿದೆ.

ವಾಣಿಜ್ಯ ನಗರ ಶಾಂಘೈನಲ್ಲಿ ತಪಾಸಣೆ ಇನ್ನಷ್ಟು ಚುರುಕುಗೊಳಿಸಲಾಗಿದೆ. 48 ಗಂಟೆಯೊಳಗೆ ಪರೀಕ್ಷಾ ವರದಿ ನೀಡಲು ಕ್ರಮವಹಿಸಲಾಗಿದೆ. ಬೀಜಿಂಗ್‌ನ ಪ್ರಮುಖ ಪ್ರವಾಸಿ ತಾಣ ಚಾವೊಯಾಂಗ್ ಅನ್ನು ಮುಚ್ಚಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.