ADVERTISEMENT

ನ್ಯೂಜಿಲೆಂಡ್‌ ಪ್ರವಾಹ: ನೂರಕ್ಕೂ ಹೆಚ್ಚು ಜನರು ಸ್ಥಳಾಂತರ

ಏಜೆನ್ಸೀಸ್
Published 31 ಮೇ 2021, 6:12 IST
Last Updated 31 ಮೇ 2021, 6:12 IST
ನ್ಯೂಜಿಲೆಂಡ್‌ನ ಕ್ಯಾಂಟರ್‌ಬರಿ ಪ್ರದೇಶದಲ್ಲಿ ನೀರು ತುಂಬಿದ ರಸ್ತೆಯಲ್ಲಿ ಚಲಿಸಿದ ವಾಹನಗಳು             –ಎಎಫ್‌‍ಪಿ ಚಿತ್ರ
ನ್ಯೂಜಿಲೆಂಡ್‌ನ ಕ್ಯಾಂಟರ್‌ಬರಿ ಪ್ರದೇಶದಲ್ಲಿ ನೀರು ತುಂಬಿದ ರಸ್ತೆಯಲ್ಲಿ ಚಲಿಸಿದ ವಾಹನಗಳು             –ಎಎಫ್‌‍ಪಿ ಚಿತ್ರ   

ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನ ಕ್ಯಾಂಟರ್‌ಬರಿ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಸೃಷ್ಟಿಯಾಗಿದ್ದು. ಸೋಮವಾರ ನೂರಾರು ಜನರನ್ನು ಸುರಕ್ಷಿತ ‍ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

ನ್ಯೂಜಿಲೆಂಡ್‌ನ ಕೆಲವು ಭಾಗಗಳಲ್ಲಿ 40 ಸೆಂ.ಮೀ. ಮಳೆ ಸುರಿದಿದೆ. ಅಲ್ಲದೆ ಸೋಮವಾರ ಸಂಜೆವರೆಗೆ ಮಳೆ ಇನ್ನಷ್ಟು ಜೋರಾಗಲಿದೆ ಎಂದು ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.

ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸೇನೆಯು ಎನ್‌ಎಚ್‌–90 ಮಿಲಿಟರಿ ಹೆಲಿಕಾಫ್ಟರ್‌ ಸಹಾಯದಿಂದ 50ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿದೆ.

ADVERTISEMENT

ಡಾರ್‌ಫೀಲ್ಡ್‌ ಪಟ್ಟಣದಲ್ಲಿ ಮರದಲ್ಲಿ ಹತ್ತಿ ಕುಳಿತಿದ್ದ ವ್ಯಕ್ತಿಯೊಬ್ಬ ಪ್ರವಾಹದ ನೀರಿನಲ್ಲಿ ಧಮುಕಿ, ಅದರಿಂದ ಈಜಿ ಹೊರಬರಲು ಪ್ರಯತ್ನಿದ್ದಾರೆ. ಆದರೆ ನೀರಿನ ರಭಸದಿಂದ ಈಜಲಾಗದೆ, ಅವರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಅವರಿಗಾಗಿ 30 ನಿಮಿಷಗಳ ಶೋಧ ನಡೆಸಲಾಯಿತು. ಈ ಬಳಿಕ ಹೆಲಿಕಾಫ್ಟರ್‌ ಸಿಬ್ಬಂದಿ ಅವರನ್ನು ರಕ್ಷಿಸಿದರು. ಪ್ರವಾಹದ ನೀರಲ್ಲಿ ತಮ್ಮ ಕಾರಿನ ಮೇಲೆ ಹತ್ತಿ ಕುಳಿತಿದ್ದ ವೃದ್ಧ ದಂಪತಿಯನ್ನು ಸಹ ಹೆಲಿಕಾಪ್ಟರ್‌ ಸಹಾಯದಿಂದ ರಕ್ಷಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.