ADVERTISEMENT

ಬ್ರಿಟನ್‌–ಭಾರತ ನಡುವಣ ದ್ವಿಮುಖ ವಿನಿಮಯಕ್ಕೆ ಉತ್ತೇಜನ : ರಿಷಿ ಸುನಕ್‌

ಪಿಟಿಐ
Published 23 ಆಗಸ್ಟ್ 2022, 12:46 IST
Last Updated 23 ಆಗಸ್ಟ್ 2022, 12:46 IST
ರಿಷಿ ಸುನಕ್‌ 
ರಿಷಿ ಸುನಕ್‌    

ಲಂಡನ್‌ (ಪಿಟಿಐ): ‘ದ್ವಿಮುಖ ವಿನಿಮಯವನ್ನು ಉತ್ತೇಜಿಸುವ ಉದ್ದೇಶದಿಂದ ಬ್ರಿಟನ್‌ ಹಾಗೂ ಭಾರತದ ನಡುವಣ ಬಾಂಧವ್ಯ ಬದಲಿಸಲು ಪ್ರಯತ್ನಿಸುತ್ತೇನೆ’ ಎಂದು ಬ್ರಿಟನ್‌ನ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್‌ ಮಂಗಳವಾರ ಹೇಳಿದ್ದಾರೆ.

ಉತ್ತರ ಲಂಡನ್‌ನಲ್ಲಿ ಕನ್ಸರ್ವೇಟಿವ್‌ ಫ್ರೆಂಡ್ಸ್‌ ಆಫ್‌ ಇಂಡಿಯಾ ಸಂಸ್ಥೆ (ಸಿಎಫ್‌ಐಎನ್‌) ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಮ್ಮ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡುವ ಹಾಗೂ ಅಲ್ಲೇ ಇದ್ದುಕೊಂಡು ಕೆಲ ಕೆಲಸಗಳನ್ನು ಮಾಡಲು ನಮಗೆ ಅವಕಾಶವಿದೆ. ಅದರ ಅರಿವೂ ನಮಗೆಲ್ಲಾ ಇದೆ. ಈ ಬಾಂಧವ್ಯವನ್ನು ನಾವು ಭಿನ್ನ ನೆಲೆಯಲ್ಲಿ ನೋಡಬೇಕಿದೆ. ಬ್ರಿಟನ್‌ನಲ್ಲಿರುವ ನಾವೆಲ್ಲಾ ಭಾರತದಿಂದ ಕಲಿಯುವುದೂ ಬಹಳಷ್ಟಿದೆ’ ಎಂದಿದ್ದಾರೆ.

‘ನಮ್ಮ ದೇಶದ ವಿದ್ಯಾರ್ಥಿಗಳು ಭಾರತಕ್ಕೆ ಹೋಗಿ ಕಲಿಯುವುದು ಸುಲಭ ಎಂಬುದನ್ನು ಖಾತರಿಪಡಿಸಿಕೊಳ್ಳಲು ನಾನು ಬಯಸುತ್ತೇನೆ. ನಮ್ಮ ದೇಶದ ಕಂಪನಿಗಳು ಹಾಗೂ ಭಾರತದ ಕಂಪನಿಗಳು ಜೊತೆಗೂಡಿ ಕೆಲಸ ಮಾಡುವಂತಾಗಬೇಕಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.