ADVERTISEMENT

ಭಯೋತ್ಪಾದನೆ ಬೆಂಬಲಿಸಿದರೆ ಶಿಕ್ಷೆಯಾಗಬೇಕು: ಆಂಟೊನಿಯೊ ಗುಟೆರ‍ಸ್‌

ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ

ಪಿಟಿಐ
Published 21 ಫೆಬ್ರುವರಿ 2019, 18:59 IST
Last Updated 21 ಫೆಬ್ರುವರಿ 2019, 18:59 IST
ಆಂಟೊನಿಯೊ ಗುಟೆರ‍ಸ್‌
ಆಂಟೊನಿಯೊ ಗುಟೆರ‍ಸ್‌   

ವಿಶ್ವಸಂಸ್ಥೆ: ‘ಎಲ್ಲ ದೇಶಗಳೂ ಅಂತರರಾಷ್ಟ್ರೀಯ ಕಾನೂನಿನಡಿ ಹೊಣೆಗಾರಿಕೆ ಹೊಂದಿರಬೇಕು ಮತ್ತು ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲ ನೀಡುವವರಿಗೆ ಶಿಕ್ಷೆಯಾಗಬೇಕು’ ಎಂದುವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರ‍ಸ್‌ ತಿಳಿಸಿದ್ದಾರೆ.

ಇದೇ ವೇಳೆ ಪುಲ್ವಾಮಾ ದಾಳಿಗೆ ಅವರು ಖಂಡನೆ ವ್ಯಕ್ತಪಡಿಸಿದ್ದಾರೆ.

‘ಪರಸ್ಪರಅರ್ಥಪೂರ್ಣ ಒಡಂಬಡಿಕೆಯ ಮೂಲಕ ಸಮಸ್ಯೆಗಳನ್ನುಶಾಂತಿಯುತವಾಗಿ ಮತ್ತು ತೃಪ್ತಿಕರವಾಗಿ ಬಗೆಹರಿಸಿಕೊಳ್ಳಬಹುದು’ ಎಂದು ಹೇಳಿದ್ದಾರೆ.

ADVERTISEMENT

ಪುಲ್ವಾಮಾ ದಾಳಿ ನಂತರ ಉಭಯ ದೇಶಗಳ ನಡುವೆ ಉಂಟಾಗಿರುವ ಸಂಘರ್ಷಮಯ ವಾತಾವರಣ ತಿಳಿಗೊಳಿಸಲು ಭಾರತ ಮತ್ತು ಪಾಕಿಸ್ತಾನ ‘ಗರಿಷ್ಠ ಸಂಯಮ’ ಪ್ರದರ್ಶಿಸಬೇಕು ಹಾಗೂ ತತ್‌ಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.