ADVERTISEMENT

ಗೂಗಲ್‌ನಲ್ಲಿ ಬಿಕಾರಿ ಎಂದು ಟೈಪಿಸಿದರೆ; ನಿಮಗೆ ಪಾಕ್ ಪ್ರಧಾನಿ ಕಾಣಿಸ್ತಾರೆ!

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 15:12 IST
Last Updated 18 ಆಗಸ್ಟ್ 2019, 15:12 IST
   

ಬೆಂಗಳೂರು: ಗೂಗಲ್‌ ಸರ್ಚ್‌ ಎಂಜಿನ್‌ನಲ್ಲಿ ಏನೋ ಹುಡುಕಿದರೆ, ಇನ್ನೇನೊ ಬರುವುದು ನಮಗೆಲ್ಲ ತಿಳಿದಿದೆ. ಈಗ ನೀವು ಬಿಕಾರಿ (Bhikari) ಎಂದು ಉರ್ದುನಲ್ಲಿ ಟೈಪಿಸಿ, ಇಮೇಜ್‌ ಆಯ್ಕೆಯನ್ನು ಕ್ಲಿಕ್‌ ಮಾಡಿದರೆ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಫೋಟೊ ಬಿತ್ತವಾಗುತ್ತಿರುವುದು ಪಾಕಿಸ್ತಾನದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕಳ್ಳ, ಕ್ರಿಮಿನಲ್, ಪಪ್ಪು ಎಂದೆಲ್ಲಾ ಹುಡುಕಿದಾಗ ಅಲ್ಲಿ ಕೆಲವು ಪ್ರಮುಖರ ಫೋಟೊಗಳು ಕಾಣಸಿಕಿದ್ದು, ಹಳೆಯ ವಿಚಾರ. ಇತ್ತೀಚೆಗೆ ಈಡಿಯಟ್‌ಎಂದು ಇಂಗ್ಲಿಷ್‌ನಲ್ಲಿ ಟೈಪ್‌ ಮಾಡಿದಾಗಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಚಿತ್ರ ಬರುತ್ತಿದ್ದನ್ನು ಅಮೆರಿಕ ಕಾಂಗ್ರೆಸ್‌ನ ಸದಸ್ಯರು ಗೂಗಲ್‌ ಸಿಇಒಸುಂದರ್ ಪಿಚ್ಚೈಗೆ ಪ್ರಶ್ನಿಸಿದ್ದರು.

ಆಗ ಅವರುಗೂಗಲ್ ಸರ್ಚ್ ವೆಬ್‌ ಪುಟ ಕೆಲಸ ಮಾಡುವುದು ಹೇಗೆಂದು ತಾಂತ್ರಿಕವಾಗಿ ಗೂಗಲ್‌ ಸಿಇಒ ತಿಳಿಸಿಕೊಟ್ಟಿದ್ದರು. ಅಲ್ಲದೆ, ಅಲ್ಗಾರಿಥಮ್‌ನ ಲೆಕ್ಕಾಚಾರದ ಮೇಲೆ ಜನಪ್ರಿಯ ಕೀವರ್ಡ್‌ಗಳು, ಫೋಟೋಗಳು ಬರುತ್ತವೆ. ಇದರಲ್ಲಿ ಯಾವುದೇ ಮಾನವ ಹಸ್ತಕ್ಷೇಪವಿಲ್ಲ ಎಂಬುದನ್ನು ಅವರು ವಿವರಿಸಿದ್ದರು.

ADVERTISEMENT

ಈಗ ಅದೇ ರೀತಿ ಬಿಕಾರಿ ಎಂದು ಉರ್ದುನಲ್ಲಿ ಟೈಪ್‌ ಮಾಡಿದರೆ, ಇಮ್ರಾನ್‌ ಖಾನ್‌ ಫೋಟೊ ಬರುತ್ತಿರುವುದು ಪಾಕಿಸ್ತಾನದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿಗೂಗಲ್ ಸಿಇಓ ಅವರನ್ನುಈ ಬಗ್ಗೆ ಪ್ರಶ್ನಿಸಲು ಪಾಕಿಸ್ತಾನದ ಪಂಜಾಬ್‌ ವಿಧಾನಸಭೆ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.