ADVERTISEMENT

ಕೊಲಂಬೊಗೆ ಶೀಘ್ರ ಐಎಂಎಫ್‌ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 13:57 IST
Last Updated 18 ಜೂನ್ 2022, 13:57 IST

ಕೊಲಂಬೊ: ದ್ವೀಪ ರಾಷ್ಟ್ರದ ಆರ್ಥಿಕ ಚೇತರಿಕೆಗೆ ಬೆಂಬಲ ನೀಡುವ ಕಾರ್ಯಕ್ರಮ ಕುರಿತು ಚರ್ಚಿಸಲುಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ತಂಡ ಸೋಮವಾರ ಕೊಲಂಬೊಗೆ ಭೇಟಿ ನೀಡಲಿದೆ.

ಆರ್ಥಿಕ ಬಿಕ್ಕಟ್ಟಿನಿಂದ ದ್ವೀಪ ರಾಷ್ಟ್ರವು ಆಹಾರ, ಔಷಧ, ಅಡುಗೆ ಅನಿಲ ಮತ್ತು ಇಂಧನ ಸೇರಿದಂತೆ ಅಗತ್ಯ ವಸ್ತುಗಳ ತೀವ್ರ ಕೊರತೆ ಎದುರಿಸುತ್ತಿದೆ.

ಆರ್ಥಿಕ ಕಾರ್ಯಕ್ರಮ ಕುರಿತು ಚರ್ಚಿಸಲು ಐಎಂಎಫ್ ತಂಡ ಇದೇ 20ರಿಂದ 30ರವರೆಗೂ ಕೊಲಂಬೊದಲ್ಲಿ ಸಭೆಗಳನ್ನು ನಡೆಸಲಿದೆ ಎಂದುಪತ್ರಿಕಾ ಹೇಳಿಕೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.