ADVERTISEMENT

ಸಾವಿರ ವರ್ಷ ಜೈಲಿನಲ್ಲಿರಲೂ ಸಿದ್ಧ ಎಂದ ಇಮ್ರಾನ್ ಖಾನ್

ಪಿಟಿಐ
Published 18 ಆಗಸ್ಟ್ 2023, 15:54 IST
Last Updated 18 ಆಗಸ್ಟ್ 2023, 15:54 IST
   

ಇಸ್ಲಾಮಾಬಾದ್‌: ದೇಶಕ್ಕಾಗಿ ಸಾವಿರ ವರ್ಷ ಕಾರಾಗೃಹದಲ್ಲಿ ಇರಲೂ ಸಿದ್ಧ ಎಂದು ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್ ಶುಕ್ರವಾರ ಹೇಳಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 

ತೋಷಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್‌ ಖಾನ್‌  (70) ಅವರಿಗೆ ಇಲ್ಲಿನ ಸೆಷನ್ಸ್ ನ್ಯಾಯಾಲಯ ಆಗಸ್ಟ್‌ 5ರಂದು ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ಸದ್ಯ ಅವರನ್ನು ಪಂಜಾಬ್‌ ಪ್ರಾಂತ್ಯದ ಅಟಕ್ ಜೈಲಿನಲ್ಲಿ ಇರಿಸಲಾಗಿದೆ.

ಖಾನ್‌ ಅವರನ್ನು ಜೈಲಿನಲ್ಲಿ ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಾಕಿಸ್ತಾನ್‌ ತೆಹ್ರೀಕ್‌ ಇ ಇನ್ಸಾಫ್ (ಪಿಟಿಐ) ಮುಖ್ಯಸ್ಥರ ಕಾನೂನು ತಂಡದ ಸದಸ್ಯ ಉಮೀರ್‌ ನಿಯಾಝಿ, ‘ಖಾನ್‌ ಅವರ ಆರೋಗ್ಯ ಚೆನ್ನಾಗಿದೆ. ಅವರ ಗಡ್ಡ ಬೆಳೆದಿದ್ದು, ಕನ್ನಡಿ ಇರುವ ಶೇವಿಂಗ್‌ ಕಿಟ್‌ ಅನ್ನು ಇಂದು ಒದಗಿಸಲಾಗಿದೆ. ‘ಜೈಲಿನಲ್ಲಿ ಯಾವುದೇ ಸೌಲಭ್ಯ ನೀಡದಿರುವ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ದೇಶಕ್ಕೋಸ್ಕರ ಸಾವಿರ ವರ್ಷ ಜೈಲಿನಲ್ಲಿ ಇರಲೂ ಸಿದ್ಧ ಎಂದು ಖಾನ್ ಹೇಳಿದರು’ ಎಂದು ತಿಳಿಸಿದರು’ ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್ ಪತ್ರಿಕೆ  ವರದಿ ಮಾಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.