ADVERTISEMENT

ಅಮೆರಿಕ: ಸಂವಿಧಾನ ಆಶಯ ಎತ್ತಿಹಿಡಿಯಲು ಸೂಚನೆ

ಸೇನಾಪಡೆಗಳ ಮುಖ್ಯಸ್ಥರಿಂದ ಜಂಟಿ ಹೇಳಿಕೆ

ಪಿಟಿಐ
Published 13 ಜನವರಿ 2021, 7:10 IST
Last Updated 13 ಜನವರಿ 2021, 7:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಸಾಂವಿಧಾನಿಕ ಆಶಯಗಳನ್ನು ಎತ್ತಿ ಹಿಡಿಯುವಂತೆ ಯೋಧರಿಗೆ ಸೂಚನೆ ನೀಡಿ ಅಮೆರಿಕದ ಸೇನಾಪಡೆಗಳ ಮುಖ್ಯಸ್ಥರು ಜಂಟಿ ಹೇಳಿಕೆ ನೀಡಿದ್ದಾರೆ. ಇದು ಅಮೆರಿಕ ಇತಿಹಾಸದಲ್ಲಿಯೇ ಸೇನಾ ಮುಖ್ಯಸ್ಥರ ಅಪರೂಪದ ನಡೆ ಎಂದು ಹೇಳಲಾಗುತ್ತಿದೆ.

ವಾಕ್‌ ಸ್ವಾತಂತ್ರ್ಯ ಎಂಬುದು ಹಿಂಸೆಗೆ ಪ್ರಚೋದನೆ ನೀಡಲು ನೀಡಿದ ಹಕ್ಕು ಎಂಬುದಾಗಿ ಯಾರೂ ಭಾವಿಸಬಾರದು ಎಂದೂ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಬೆಂಬಲಿಗರು ಇತ್ತೀಚೆಗೆ ನಡೆಸಿದ ದಾಂದಲೆ, ಹಿಂಸಾ ಕೃತ್ಯದ ಹಿನ್ನೆಲೆಯಲ್ಲಿ ಸೇನಾ ಮುಖ್ಯಸ್ಥರಿಂದ ಈ ಹೇಳಿಕೆ ಹೊರಬಿದ್ದಿದೆ ಎನ್ನಲಾಗುತ್ತಿದೆ.

ಜಾಯಿಂಟ್‌ ಚೀಫ್‌ ಆಫ್‌ ಸ್ಟಾಫ್‌ ಜನರಲ್‌ ಮಾರ್ಕ್‌ ಮಿಲಿ ಅವರೂ ಈ ಹೇಳಿಕೆಗೆ ಸಹಿ ಹಾಕಿದ್ದಾರೆ. ಜ.6ರಂದು ಕ್ಯಾಪಿಟಲ್‌ ಹಿಲ್‌ ಮೇಲೆ ನಡೆದ ದಾಳಿಯನ್ನು ಈ ಹೇಳಿಕೆಯಲ್ಲಿ ಖಂಡಿಸಲಾಗಿದೆ.

ADVERTISEMENT

‘ಜಂಟಿ ಹೇಳಿಕೆ ನೀಡುವ ಮೂಲಕ ಅಮೆರಿಕ ಸೇನೆ ತಾನು ರಾಜಕೀಯದಿಂದ ದೂರ ಇರುವ ಸಂದೇಶ ರವಾನಿಸಿದೆ. ಸಂವಿಧಾನದ ಆಶಯ, ಮೌಲ್ಯಗಳಿಗೆ ವಿರುದ್ಧವಾಗಿ ಅಧ್ಯಕ್ಷರೊಬ್ಬರು ಆದೇಶ ನೀಡುವುದನ್ನು ಒಪ್ಪುವುದಿಲ್ಲ ಎಂಬ ಸಂದೇಶವನ್ನು ಸಹ ಸೇನಾಪಡೆಗಳ ಮುಖ್ಯಸ್ಥರು ನೀಡಿದ್ದಾರೆ’ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.