ADVERTISEMENT

ಅಮೆರಿಕದಲ್ಲಿ ಆದಾಯ ಅಸಮಾನತೆ ಇಳಿಕೆ: ಸಮೀಕ್ಷೆ

ಪಿಟಿಐ
Published 11 ಸೆಪ್ಟೆಂಬರ್ 2025, 13:36 IST
Last Updated 11 ಸೆಪ್ಟೆಂಬರ್ 2025, 13:36 IST
<div class="paragraphs"><p>ಆದಾಯ ಅಸಮಾನತೆ</p></div>

ಆದಾಯ ಅಸಮಾನತೆ

   

ವಾಷಿಂಗ್ಟನ್‌: 2023–24ರ ಅವಧಿಯಲ್ಲಿ ಅಮೆರಿಕದಲ್ಲಿನ ಆದಾಯ ಅಸಮಾನತೆ ಕಡಿಮೆಯಾಗಿದ್ದು, ಬಹಳಷ್ಟು ಮಂದಿ ಪದವೀಧರರಾಗಿದ್ದಾರೆ ಎಂದು ಅಮೆರಿಕದ ಜನಜೀವನ ಕುರಿತಾದ ಅತಿದೊಡ್ಡ ವಾರ್ಷಿಕ ಸಮೀಕ್ಷೆ ’ಅಮೆರಿಕನ್‌ ಕಮ್ಯೂನಿಟಿ ಸರ್ವೆ’ ದತ್ತಾಂಶಗಳು ತಿಳಿಸಿವೆ.

ಅಲ್ಲದೇ, ಏಷ್ಯಾ ಮೂಲದ ಜನರು ಹಾಗೂ ಸ್ಪ್ಯಾನಿಷ್‌ ಮಾತನಾಡುವ ದೇಶಗಳ ಜನರ ಸಂಖ್ಯೆಯೂ ಅಮೆರಿಕದಲ್ಲಿ ಏರಿಕೆಯಾಗಿದೆ ಎಂದು ಸಮೀಕ್ಷೆ ತಿಳಿಸಿದೆ. ಆದಾಯ, ವಸತಿ ವೆಚ್ಚ, ಕಂಪ್ಯೂಟರ್‌ ಬಳಕೆ, ಶಿಕ್ಷಣ ಸೇರಿದಂತೆ 40 ವಿಷಯಗಳ ಕುರಿತು 35 ಲಕ್ಷ ಕುಟುಂಬಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಈ ಸಮೀಕ್ಷೆ ಒಳಗೊಂಡಿದೆ. 

ADVERTISEMENT

ದತ್ತಾಂಶಗಳ ಪ್ರಕಾರ, 2023ರಿಂದ 2024ರವರೆಗೆ ಅಮೆರಿಕದಲ್ಲಿ ಮಧ್ಯಮ ವರ್ಗದ ಕುಟುಂಬದ ಆದಾಯವು ₹70 ಲಕ್ಷದಿಂದ ₹72 ಲಕ್ಷಕ್ಕೆ ಏರಿಕೆಯಾಗಿದೆ ಈ ಕಾರಣದಿಂದ ಆದಾಯ ಅಸಮಾನತೆ ಬಹುತೇಕ ಕಡಿಮೆಯಾಗಿದೆ. ಇದೇ ಅವಧಿಯಲ್ಲಿ  ಏಷ್ಯಾದ ಜನರ ಸಂಖ್ಯೆ ಶೇ6 ರಿಂದ ಶೇ6.3ಕ್ಕೆ ಏರಿಕೆಯಾಗಿದ್ದರೆ, ಸ್ಪ್ಯಾನಿಷ್‌ ಮಾತನಾಡುವ ದೇಶಗಳ ಜನರ ಸಂಖ್ಯೆ ಶೇ19.4ರಿಂದ ಶೇ20ಕ್ಕೆ ತಲುಪಿದೆ.

ಅಮೆರಿಕದ ವಿವಿಧ ರಾಜ್ಯಗಳು, ಪ್ರಮುಖ ನಗರಗಳಲ್ಲಿ ಮನೆಗಳ ಬಾಡಿಗೆ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದಾಗಿ ಶೇ11 ಮಂದಿ ಬೇರೆ–ಬೇರೆ ನಗರಗಳಿಗೆ ಕಳೆದ ವರ್ಷ ಸ್ಥಳಾಂತರಗೊಂಡಿದ್ದಾರೆ. ಅದಕ್ಕೂ ಹಿಂದಿನ ವರ್ಷದಲ್ಲಿ ಈ ರೀತಿ ಸ್ಥಳಾಂತರಗೊಂಡವರ ಸಂಖ್ಯೆ ಶೇ11.3 ಆಗಿತ್ತು ಎಂದು ದತ್ತಾಂಶದಿಂದ ತಿಳಿದುಬಂದಿದೆ.

ಇನ್ನು ಮದುವೆಯಾಗದೇ ಉಳಿದಿರುವ ಪುರುಷರ ಸಂಖ್ಯೆ ಶೇ 37.2 ರಿಂದ ಶೇ37.6ಕ್ಕೆ ತಲುಪಿದ್ದರೆ, ಅವಿವಾಹಿತ ಮಹಿಳೆಯರ ಸಂಖ್ಯೆ ಶೇ31.6 ರಿಂದ 32.1ಕ್ಕೆ ಏರಿಕೆಯಾಗಿದೆ ಎಂದೂ ಸಮೀಕ್ಷೆ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.