ADVERTISEMENT

ಗಂಭೀರ ಪ್ರಕರಣಗಳಿಗೆ ಶಿಕ್ಷೆ ನೀಡಲು ಶೂನ್ಯ ಸಹಿಷ್ಣುತೆ ನೀತಿ: ತಿರುಮೂರ್ತಿ

ವಿಶ್ವಸಂಸ್ಥೆಯಲ್ಲಿನ ‘ಶಾಂತಿಪಾಲನಾ ಪಡೆ ನಡವಳಿಕೆ ಮತ್ತು ಶಿಸ್ತು‘ ಕುರಿತ ಸಭೆಯಲ್ಲಿ ತಿರುಮೂರ್ತಿ

ಪಿಟಿಐ
Published 30 ಜೂನ್ 2021, 6:29 IST
Last Updated 30 ಜೂನ್ 2021, 6:29 IST
ಟಿ.ಎಸ್.ತಿರುಮೂರ್ತಿ, ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ.ಚಿತ್ರ: ತಿರುಮೂರ್ತಿಯವರ ಟ್ವಿಟ್ಟರ್ ಖಾತೆಯಿಂದ
ಟಿ.ಎಸ್.ತಿರುಮೂರ್ತಿ, ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ.ಚಿತ್ರ: ತಿರುಮೂರ್ತಿಯವರ ಟ್ವಿಟ್ಟರ್ ಖಾತೆಯಿಂದ   

ವಿಶ್ವಸಂಸ್ಥೆ: ಶಾಂತಿಪಾಲನ ಪಡೆಯ ನಡವಳಿಕೆ ಕುರಿತು ಹೆಚ್ಚಿನ ಗಮನ ಹರಿಸುತ್ತಿರುವ ಭಾರತ, ಲೈಂಗಿಕ ಶೋಷಣೆ ಮತ್ತು ನಿಂದನೆಗೆ ಸಂಬಂಧಿಸಿದ ಗಂಭೀರ ಪ್ರಕರಣಗಳಿಗೆ ಶಿಕ್ಷೆ ನೀಡುವುದಕ್ಕಾಗಿ ‘ಶೂನ್ಯ ಸಹಿಷ್ಣುತೆ ನೀತಿ‘ ಅಳವಡಿಸಿಕೊಂಡಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿ ಟಿ.ಎಸ್. ತಿರುಮೂರ್ತಿ ತಿಳಿಸಿದ್ದಾರೆ.

‘ಶಾಂತಿಪಾಲನಾ ಪಡೆ ಸಿಬ್ಬಂದಿಯ ನಡವಳಿಕೆ ಬಲಪಡಿಸುವ‘ ಕುರಿತು ವಿಶ್ವಸಂಸ್ಥೆಯ ಸದಸ್ಯರಾಷ್ಟ್ರಗಳೊಂದಿಗೆ ಸೋಮವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ‘ಲೈಂಗಿಕ ಶೋಷಣೆ ಮತ್ತು ನಿಂದನೆಯನ್ನು ನಿಯಂತ್ರಿಸುವುದು ಮತ್ತು ನಿರ್ಮೂಲನೆ ಮಾಡುವುದಕ್ಕಾಗಿ ಆಡಳಿತ ವ್ಯವಸ್ಥೆಯನ್ನು ಬಲವರ್ಧಿಸುವ ಉದ್ದೇಶವನ್ನೂ ಭಾರತ ಹೊಂದಿದೆ‘ ಎಂದು ತಿಳಿಸಿದರು.

‘ಈ ಶಾಂತಿಪಾಲನಾ ಪಡೆಯ ಬಗೆಗಿರುವ ಸ್ಪಷ್ಟವಾದ ಚಿತ್ರಣವೇ, ವಿಶ್ವಸಂಸ್ಥೆ ಕೈಗೊಳ್ಳುವ ಶಾಂತಿ ಪ್ರಕ್ರಿಯೆಯ ಯಶಸ್ಸಿಗೆ ಕಾರಣವಾಗಿದೆ‘ ಎಂದು ಅವರು ಹೇಳಿದ್ದಾರೆ.

ADVERTISEMENT

ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ ಅತಿ ಹೆಚ್ಚು ಸದಸ್ಯರನ್ನು ನೀಡಿದ ಪ್ರಮುಖ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಭಾರತದ ಶಾಂತಿಪಾಲನಾ ಪಡೆ ಮತ್ತು ಪಾಲುದಾರರಿಗೆ ವಿಶ್ವಸಂಸ್ಥೆಯ ಶಾಂತಿಪಾಲನ ಪಡೆ ಕೇಂದ್ರ (ಸಿಯುಎನ್‌ಪಿಕೆ) ‘ಶಾಂತಿಪಾಲನೆಯಲ್ಲಿನ ಶಿಸ್ತು ಮತ್ತು ನಡವಳಿಕೆ‘ ಕುರಿತು 20 ವರ್ಷಗಳಿಂದ ತರಬೇತಿ ನೀಡುತ್ತಿದೆ. ಈ ಸಂಸ್ಥೆ ಹತ್ತು ವರ್ಷಗಳ ಹಿಂದೆ ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವು ತರಬೇತಿ ಮಾಡ್ಯೂಲ್‌ಗಳನ್ನು ಪರಿಚಯಿಸಿದೆ ಎಂದು ತಿರುಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.