ADVERTISEMENT

ಮಾಲ್ಡೀವ್ಸ್‌ನಲ್ಲಿ ಭಾರತ- ಪಾಕಿಸ್ತಾನ ಮಾತಿನ ಚಕಮಕಿ

ಪಾಕಿಸ್ತಾನ ಕಾಶ್ಮೀರ ವಿಷಯ ಪ್ರಸ್ತಾಪಿಸಿದ್ದಕ್ಕೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 11:21 IST
Last Updated 18 ಸೆಪ್ಟೆಂಬರ್ 2019, 11:21 IST
ರಾಜ್ಯ ಸಭಾ ಉಪ ಸಭಾ ಪತಿ ಹರಿವಂಶ ಸಿಂಗ್
ರಾಜ್ಯ ಸಭಾ ಉಪ ಸಭಾ ಪತಿ ಹರಿವಂಶ ಸಿಂಗ್    

ಮಾಲ್ಡೀವ್ಸ್: ಕಾಶ್ಮೀರ ವಿಷಯವನ್ನು ಪಾಕಿಸ್ತಾನ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಭಾರತ, ಗಡಿ ಭಾಗದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ಪಾಕಿಸ್ತಾನನಿಲ್ಲಿಸಬೇಕು, ಆ ಮೂಲಕ ಶಾಂತಿ ಸ್ಥಾಪನೆಗೆ ಮುಂದಾಗಬೇಕು ಎಂದು ಆಗ್ರಹಿಸಿದೆ.

ದಕ್ಷಿಣ ಏಷ್ಯಾ ಸ್ಪೀಕರ್ಸ್ ಸಮಿತಿ ವತಿಯಿಂದಮಾಲ್ಡೀವ್ಸ್‌ನಲ್ಲಿ ಏರ್ಪಡಿಸಿರುವ'ಸುಸ್ಥಿರ ಅಭಿವೃದ್ಧಿ ಗುರಿಗಳು' (ಎಸ್‌ಡಿಜಿ)ಎಂಬ ವಿಷಯದ ಕುರಿತ ಕಾರ್ಯಕ್ರಮದಲ್ಲಿಈ ಪ್ರಸಂಗ ನಡೆದಿದೆ. ಆ ಸಮಯದಲ್ಲಿ ಪಾಕಿಸ್ತಾನ ಸಂಸತ್ತಿನ ಉಪ ಸಭಾಪತಿ ಖಾಸಿಂ ಸುರಿ ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿದರು. ಇದರಿಂದ ಮಧ್ಯಪ್ರವೇಶಿಸಿದ ಭಾರತದರಾಜ್ಯಸಭೆ ಉಪ ಸಭಾಪತಿ ಹರಿವಂಶಸಿಂಗ್, ಕಾಶ್ಮೀರ ಭಾರತದ ಆಂತರಿಕ ವಿಷಯ, ಅದನ್ನು ಇಲ್ಲಿ ಪ್ರಸ್ತಾಪಿಸುವುದು ಸರಿಯಾದ ಕ್ರಮವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ಸಮಯದಲ್ಲಿ ಎರಡೂ ರಾಷ್ಟ್ರಗಳ ಉಪ ಸಭಾಪತಿಗಳ ನಡುವೆ ಮಾತಿನ ಚಕಮಕಿಯೂ ನಡೆಯಿತು.

ADVERTISEMENT

ಮತ್ತೆ ಮಾತು ಮುಂದುವರಿಸಿದ ಉಪಸಭಾಪತಿ ಹರಿವಂಶ್ ಸಿಂಗ್ ಅವರು, ಪಾಕಿಸ್ತಾನ ಭಯೋತ್ಪಾದನೆಗೆ ನೀಡುತ್ತಿರುವ ಎಲ್ಲಾ ರೀತಿಯ ನೆರವುಗಳನ್ನು ನಿಲ್ಲಿಸಬೇಕು ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.