ADVERTISEMENT

ತೈವಾನ್ ಬಿಕ್ಕಟ್ಟಿನ ನಡುವೆಯೇ ಚೀನಾ ಗಡಿ ಸನಿಹ ಭಾರತ–ಅಮೆರಿಕ ಮೆಗಾ ಸಮರಾಭ್ಯಾಸ

ಪಿಟಿಐ
Published 4 ಆಗಸ್ಟ್ 2022, 4:14 IST
Last Updated 4 ಆಗಸ್ಟ್ 2022, 4:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಚೀನಾ ಹಾಗೂ ತೈವಾನ್ ನಡುವೆ ಯುದ್ಧದ ಕಾರ್ಮೋಡ ಕವಿದಿರುವ ಬೆನ್ನಲ್ಲೇ ಭಾರತ–ಅಮೆರಿಕ, ಚೀನಾ ಗಡಿಯಲ್ಲಿ ಜಂಟಿ ಮೆಗಾ ಸಮರಾಭ್ಯಾಸ ನಡೆಸಲು ಯೋಜಿಸಿವೆ.

ಬರುವ ಅಕ್ಟೋಬರ್ 14 ರಿಂದ 31ರವರೆಗೆ ಭಾರತ ಹಾಗೂ ಅಮೆರಿಕದ ಮಿಲಿಟರಿ ವಿಭಾಗದಿಂದ ಉತ್ತರಾಖಂಡದಹೌಲಿಯಲ್ಲಿ ಈ ಸಮರಾಭ್ಯಾಸ ನಡೆಯಲಿದೆ ಎಂದು ರಕ್ಷಣಾ ಇಲಾಖೆ ಖಚಿತಪಡಿಸಿದೆ. ಇದುಭಾರತ–ಅಮೆರಿಕದ 18ನೇ ಆವೃತ್ತಿಯ ಸಮರಾಭ್ಯಾಸ ಆಗಿದೆ.

ಚೀನಾ, ಭಾರತದೊಂದಿಗೆ ಹೊಂದಿರುವ ಪೂರ್ವ ಲಡಾಖ್‌ನ ಗಡಿ ಕಲಹ ಪ್ರದೇಶದ ಸನಿಹದಲ್ಲಿಉತ್ತರಾಖಂಡದ ಹೌಲಿ ಇದೆ.

ADVERTISEMENT

ಕಳೆದ ವರ್ಷ ಅಮೆರಿಕ–ಭಾರತ ಜಂಟಿ ಸಮರಾಭ್ಯಾಸವು ಅಮೆರಿಕದ ಅಲಾಸ್ಕಾದಲ್ಲಿ ನಡೆದಿತ್ತು. ಭಾರತವನ್ನು ಪ್ರಮುಖ ರಕ್ಷಣಾ ಪಾಲುದಾರ ಎಂದು ಅಮೆರಿಕ2016 ರಲ್ಲಿ ಘೋಷಿಸಿದೆ.

ಎರಡೂ ರಾಷ್ಟ್ರಗಳ ನಡುವೆ ಕಳೆದ ಐದಾರು ವರ್ಷಗಳಲ್ಲಿ ಶಸ್ತ್ರಾಸ್ತ್ರ ಖರೀದಿ, ಒಪ್ಪಂದ ಹಾಗೂ ಒಡಂಬಡಿಕೆಗಳಿಗೆ ಸಂಬಂಧಿಸಿದಂತೆ ಮಹತ್ವದ ಸುಧಾರಣೆಗಳಾಗಿವೆ.COMCASA (ಸಂವಹನ ಹೊಂದಾಣಿಕೆ ಮತ್ತು ಭದ್ರತಾ ಒಪ್ಪಂದ) ಅಡಿ ಭಾರತ ಮತ್ತು ಅಮೆರಿಕದ ಮಿಲಟರಿ ನಡುವೆ ಉನ್ನತ ತಂತ್ರಜ್ಞಾನ ಹಂಚಿಕೆಗೆ ಸಂಬಂಧಿಸಿದಂತೆ 2018 ರಲ್ಲಿ ಮಹತ್ವದ ಬದಲಾವಣೆ ಆಗಿದೆ.

ತೈವಾನ್ ತನ್ನದು ಎಂದು ಪ್ರತಿಪಾದಿಸುತ್ತಿರುವ ಚೀನಾವು, ತೈವಾನ್‌ಗೆ ಅಮೆರಿಕ ಸ್ಪೀಕರ್ ನ್ಯಾನ್ಸಿ ಪೆಲೊಸಿ ಅವರ ಭೇಟಿಯನ್ನು ಕಟುವಾಗಿ ವಿರೋಧಿಸಿತ್ತು. ಹೆಚ್ಚು–ಕಡಿಮೆಯಾದರೆ ತೈವಾನ್ ಮೇಲೆ ಮಿಲಟರಿ ಕಾರ್ಯಾಚರಣೆ ನಡೆಸುವುದಾಗಿ ಚೀನಾ ಗುಡುಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.