ADVERTISEMENT

ಅಫ್ಗನ್‌: ಕಾಬೂಲ್‌ನಿಂದ ವಿಶೇಷ ವಿಮಾನದಲ್ಲಿ 104 ಜನರ ಸ್ಥಳಾಂತರ

ಪಿಟಿಐ
Published 10 ಡಿಸೆಂಬರ್ 2021, 13:17 IST
Last Updated 10 ಡಿಸೆಂಬರ್ 2021, 13:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಹತ್ತು ಭಾರತೀಯ ಪ್ರಜೆಗಳು ಸೇರಿದಂತೆ ಒಟ್ಟು 104 ಜನರನ್ನು ಭಾರತವು ವಿಶೇಷ ವಿಮಾನದ ಮೂಲಕ ಶುಕ್ರವಾರ ಕಾಬೂಲ್‌ನಿಂದ ದೆಹಲಿಗೆ ಸ್ಥಳಾಂತರಿಸಿದೆ.

‘ದೇವಿ ಶಕ್ತಿ’ ಕಾರ್ಯಾಚರಣೆ ಅಡಿಯಲ್ಲಿ ಭಾರತವು ವಿಶೇಷ ವಿಮಾನವನ್ನು ವ್ಯವಸ್ಥೆಗೊಳಿಸಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.

10 ಭಾರತೀಯರು, 94 ಅಫ್ಗಾನಿಸ್ತಾನಿಯರನ್ನು ಸ್ಥಳಾಂತರ ಮಾಡಲಾಗಿದೆ. ಇವರಲ್ಲಿ 9 ಮಕ್ಕಳು ಹಾಗೂ ಮೂರು ಶಿಶುಗಳು ಸೇರಿವೆ.

ADVERTISEMENT

ವಿಮಾನವು ಗುರುಗ್ರಂಥ ಸಾಹಿಬ್ ಮತ್ತು ಹಿಂದೂ ಧಾರ್ಮಿಕ ಗ್ರಂಥಗಳ ಮೂರು ಪ್ರತಿಗಳನ್ನು ಕಾಬೂಲ್‌ನ ಪುರಾತನ ಅಸಾಮೈ ಮಂದಿರದಿಂದ ತಂದಿದೆ. ಭಾರತ ಸರ್ಕಾರ ಮತ್ತು ದೆಹಲಿಯಲ್ಲಿನ ಅಫ್ಗನ್ ರಾಯಭಾರ ಕಚೇರಿ ಸಹಯೋಗದಲ್ಲಿ ಈ ವಿಶೇಷ ವಿಮಾನವನ್ನು ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.