ADVERTISEMENT

ವಿದ್ಯಾರ್ಥಿಗಳ ಮರಳುವಿಕೆಗೆ ಮಾತುಕತೆ ನಡೆಸಿದ ಭಾರತ–ಚೀನಾ

ಪಿಟಿಐ
Published 23 ಜೂನ್ 2022, 14:06 IST
Last Updated 23 ಜೂನ್ 2022, 14:06 IST
ಚೀನಾದ ಭಾರತೀಯ ರಾಯಭಾರಿ ಪ್ರದೀಪ್ ಕುಮಾರ್ ರಾವತ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ
ಚೀನಾದ ಭಾರತೀಯ ರಾಯಭಾರಿ ಪ್ರದೀಪ್ ಕುಮಾರ್ ರಾವತ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ   

ಬೀಜಿಂಗ್‌:ಕೋವಿಡ್‌ನಿಂದಾಗಿ ಎರಡು ವರ್ಷಗಳಿಂದ ಮನೆಯಲ್ಲಿಯೇ ಇರುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಚೀನಾಗೆ ಮರಳುವ ಮತ್ತು ರದ್ದುಪಡಿಸಲಾಗಿದ್ದ ನೇರ ವಿಮಾನಗಳ ಪುನರಾರಂಭದ ಕುರಿತು ಭಾರತ ಮತ್ತು ಚೀನಾ ಚರ್ಚಿಸಿವೆ ಎಂದು ಬೀಜಿಂಗ್‌ನ ಭಾರತೀಯ ರಾಯಭಾರ ಕಚೇರಿ ಗುರುವಾರ ತಿಳಿಸಿದೆ.

ಚೀನಾದ ಭಾರತೀಯ ರಾಯಭಾರಿ ಪ್ರದೀಪ್ ಕುಮಾರ್ ರಾವತ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ಬುಧವಾರ ನಡೆದ ಸಭೆಯಲ್ಲಿ ವಿದ್ಯಾರ್ಥಿಗಳ ವಾಪಸಾತಿ ವಿಷಯ ಕಾಣಿಸಿಕೊಂಡಿದೆ.

‘ಸಭೆಯಲ್ಲಿ ಭಾರತೀಯ ವಿದ್ಯಾರ್ಥಿಗಳ ವಾಪಸಾತಿಗೆ ಸಂಬಂಧಿಸಿದಂತೆ ಭಾರತದ ಕಳವಳಗಳಿಗೆ ಚೀನಾ ಪ್ರಾಮುಖ್ಯತೆಯನ್ನು ನೀಡಿದೆ. ಶೀಘ್ರದಲ್ಲೇ ಈ ವಿಷಯದ ಬಗ್ಗೆ ಪ್ರಗತಿಯನ್ನು ನೋಡಬಹುದು. ಉಭಯ ದೇಶಗಳ ನಡುವೆ ನೇರ ವಿಮಾನ ಸಂಪರ್ಕವನ್ನು ಪುನರಾರಂಭಿಸುವ ಕುರಿತು ಚರ್ಚೆಗಳನ್ನು ನಡೆಸಿದ್ದಾರೆ’ ಎಂದು ವಾಂಗ್‌ ಯಿ ತಿಳಿಸಿರುವುದಾಗಿ ಭಾರತೀಯ ರಾಯಭಾರ ಕಚೇರಿಯ ಪತ್ರಿಕಾ ಪ್ರಕಟಣೆಯು ಹೇಳಿದೆ.

ADVERTISEMENT

‘ರಾಯಭಾರಿ ರಾವತ್ ಅವರುವಿದ್ಯಾರ್ಥಿಗಳ ಮರಳುವಿಕೆ ಕುರಿತು ನಾವು ಶೀಘ್ರದಲ್ಲೇ ಪ್ರಗತಿಯನ್ನು ನೋಡಬಹುದು ಎಂದು ಭಾರತದಲ್ಲಿನ ಸಂಬಂಧಿತ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದಾರೆ’ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.