ಬೀಜಿಂಗ್: ಚೀನಾ–ಭಾರತದ ಸೇನಾಪಡೆಗಳ ನಡುವೆ ಸೋಮವಾರ ರಾತ್ರಿ ಲಡಾಖ್‌ನ ಪೂರ್ವಭಾಗದ ಗಲ್ವಾನ್ ಕಣಿವೆಯಲ್ಲಿ ನಡೆದ ಗುಂಡಿನ ಕಾಳಗಕ್ಕೆ ಭಾರತವೇ ಕಾರಣ ಎಂದು ಚೀನಾ ಆರೋಪಿಸಿದೆ. ವಿವಾದಿತ ಗಡಿ ಪ್ರದೇಶ ದಾಟಿ ಭಾರತೀಯ ಸೇನೆಯೇ ನಮ್ಮ ಸಿಬ್ಬಂದಿ ಮೇಲೆ ದಾಳಿ ನಡೆಸಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯ ಆರೋಪಿಸಿದೆ.
ಭಾರತದ ಪಡೆಗಳು ಸೋಮವಾರ ರಾತ್ರಿ ಎರಡು ಬಾರಿ ಗಡಿ ದಾಟಿದ್ದವು. ನಮ್ಮ ಸೇನಾ ಪಡೆಗಳನ್ನು ಪ್ರಚೋದಿಸಿದ್ದಲ್ಲದೆ, ದಾಳಿ ಮಾಡಿದ್ದವು. ಪರಿಣಾಮವಾಗಿ ಚಕಮಕಿ ನಡೆದು ಎರಡೂ ದೇಶಗಳ ಯೋಧರಿಗೆ ಹಾನಿಯಾಗುವಂತಾಯಿತು ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್ ಆರೋಪಿಸಿದ್ದಾರೆ.
ಘಟನೆಯಲ್ಲಿ ಭಾರತದ ಸೇನಾಪಡೆಯ ಅಧಿಕಾರಿ ಮತ್ತು ಇಬ್ಬರು ಸೈನಿಕರು ಹುತಾತ್ಮರಾಗಿದ್ದರು.
ಈ ಮಧ್ಯೆ, ಪರಿಸ್ಥಿತಿ ಶಮನಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ಭಾರತೀಯ ಸೇನೆಯ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.