ADVERTISEMENT

ಸೇನಾ ಸಲಕರಣೆ ರಫ್ತಿನಲ್ಲಿ ಭಾರತ ಮುಂಚೂಣೆ

ಪಿಟಿಐ
Published 1 ನವೆಂಬರ್ 2022, 13:49 IST
Last Updated 1 ನವೆಂಬರ್ 2022, 13:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜೊಹಾನ್ಸ್‌ಬರ್ಗ್‌(‍ಪಿಟಿಐ): ಇತ್ತೀಚಿನ ವರ್ಷಗಳಲ್ಲಿ ಭಾರತ ರಕ್ಷಣಾ ಸಲಕರಣೆಗಳ ಪ್ರಮುಖ ರಫ್ತುದಾರ ದೇಶವಾಗಿ ಹೊರಹೊಮ್ಮಿದೆ. ಮಾರಿಷಸ್‌, ಮೊಜಾಂಬಿಕ್‌ ಮತ್ತು ಸಿಚೆಲ್ಸ್‌ ದೇಶಗಳು 2017–2021ರ ಅವಧಿಯಲ್ಲಿ ಭಾರತದಿಂದ ಅತಿ ಹೆಚ್ಚು ಪ್ರಮಾಣದ ಸೇನಾ ಸಲಕರಣೆಗಳನ್ನು ಆಮದು ಮಾಡಿಕೊಂಡಿವೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

ಮಂಗಳವಾರ ನಡೆದ ಸಿಐಐ–ಎಕ್ಸಿಂ ಪ್ರಾದೇಶಿಕ ಸಮಾವೇಶದಲ್ಲಿಇಂಡಿಯನ್‌ ಎಕ್ಸಿಂ ಬ್ಯಾಂಕ್‌, ‘ದಕ್ಷಿಣ ಆಫ್ರಿಕಾದೊಂದಿಗೆ ಭಾರತದ ಆರ್ಥಿಕ ಒಡಂಬಡಿಕೆಗಳ ಪುನಶ್ಚೇತನ’ ಎಂಬ ಹೆಸರಿನ ವರದಿಯನ್ನು ಬಿಡುಗಡೆ ಮಾಡಿದೆ. ಈ ಸಮಾವೇಶದಲ್ಲಿ ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು ವಿವಿಧ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವಿನ ಸಹಕಾರದ ಕುರಿತು ಚರ್ಚೆ ನಡೆಸಲಿದ್ದಾರೆ.

ವರದಿಯ ಪ್ರಕಾರ 2017ರಿಂದ 2021ರವರೆಗೆ ಆಫ್ರಿಕಾ ಮತ್ತು ಮಾರಿಷಸ್ ದೇಶಗಳು ಭಾರತದಿಂದ ಶೇಕಡ 6.6ರಷ್ಟು, ಮೊಜಾಂಬಿಕ್‌ ಶೇ 5 ಮತ್ತು ಸಿಚೆಲ್ಸ್‌ ಶೇ 2.3ರಷ್ಟು ರಕ್ಷಣಾ ಸಲಕರಣೆಗಳನ್ನು ಆಮದು ಮಾಡಿಕೊಂಡಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.