ADVERTISEMENT

ಹಿಂದೂ ರಾಷ್ಟ್ರೀಯವಾದ ದೇಶವಾಗುವ ಅಪಾಯದಲ್ಲಿ ಭಾರತ: ಆ್ಯಂಡಿ ಲೆವಿನ್‌

ಪಿಟಿಐ
Published 17 ಡಿಸೆಂಬರ್ 2022, 4:51 IST
Last Updated 17 ಡಿಸೆಂಬರ್ 2022, 4:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: 'ಭಾರತವು ಹಿಂದೂ ರಾಷ್ಟ್ರೀಯವಾದ ದೇಶವಾಗುವ ಅಪಾಯದಲ್ಲಿದೆ' ಎಂದು ಡೆಮಾಕ್ರಾಟ್‌ ಪಕ್ಷದ ಸದಸ್ಯ ಆ್ಯಂಡಿ ಲೆವಿನ್‌ ಹೇಳಿದ್ದಾರೆ. 'ಮಾನವ ಹಕ್ಕುಗಳ ರಕ್ಷಣೆ ವಿಷಯದಲ್ಲಿ ಅಮೆರಿಕ ಹೆಚ್ಚಿನ ಯಶಸ್ಸನ್ನು ಸಾಧಿಸಿದೆ' ಎಂದೂ ಹೇಳಿದ್ದಾರೆ.

'ಅಜೀವಕಾಲ ಮಾನವಹಕ್ಕುಗಳ ಹೋರಾಟಗಾರ' ಎಂದು ಸ್ವತಃ ತಮ್ಮನ್ನು ಬಣ್ಣಿಸಿಕೊಳ್ಳುವ ಲೆವಿನ್‌ ಅವರು ಅಮೆರಿಕ ಜನಪ್ರತಿನಿಧಿಗಳ ಸಭೆಯಲ್ಲಿ ಗುರುವಾರ ತಮ್ಮ ಅಧಿಕಾರವಧಿಯ ಕೊನೆಯ ಭಾಷಣ ಮಾಡುತ್ತಿದ್ದರು.

'ಭಾರತದಂತಹ ದೇಶಗಳಲ್ಲಿ ಮಾನವ ಹಕ್ಕುಗಳ ರಕ್ಷಣೆ ಕುರಿತಂತ ನಾನು ಎಂದಿಗೂ ಧ್ವನಿ ಎತ್ತುತ್ತೇನೆ. ಭಾರತವು ಜಾತ್ಯತೀತ ಪ್ರಜಾಪ್ರಭುತ್ವ ರಾಷ್ಟ್ರವಾಗುವ ಬದಲಿಗೆ ಹಿಂದೂ ರಾಷ್ಟ್ರೀಯವಾದ ದೇಶವಾಗುವ ಅಪಾಯದಲ್ಲಿದೆ' ಎಂದು ಟೀಕಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.