ADVERTISEMENT

ಬಾಂಗ್ಲಾ ನೆರವಿಗೆ ಭಾರತ ಸಿದ್ಧ: ರಾಜತಾಂತ್ರಿಕ ಅಧಿಕಾರಿ

ಪಿಟಿಐ
Published 6 ಮಾರ್ಚ್ 2023, 16:39 IST
Last Updated 6 ಮಾರ್ಚ್ 2023, 16:39 IST
.
.   

ಢಾಕಾ: ಬಾಂಗ್ಲಾದೇಶಕ್ಕೆ ನೆರವು ನೀಡಲು ಭಾರತ ಸಿದ್ಧವಾಗಿದೆ. ಜಂಟಿ ಅಭಿವೃದ್ಧಿ ಮತ್ತು ಉತ್ಪಾದನೆ ಸೇರಿದಂತೆ ದ್ವಿಪಕ್ಷೀಯ ಸಂಬಂಧ ವೃದ್ಧಿ ಉದ್ದೇಶದಿಂದ ಢಾಕಾಗೆ ಸಹಕಾರ ನೀಡಲು ರಕ್ಷಣಾ ಕೈಗಾರಿಕೆಗಳನ್ನು ಗುರುತಿಸಿದೆ ಎಂದು ಇಲ್ಲಿನ ಭಾರತದ ರಾಜತಾಂತ್ರಿಕ ಅಧಿಕಾರಿ ತಿಳಿಸಿದ್ದಾರೆ.

ಭಾರತ–ಬಾಂಗ್ಲಾ ನಡುವೆ ರಕ್ಷಣಾ ಉದ್ಯಮದ ಸಹಕಾರವನ್ನು ಉತ್ತೇಜಿಸಲು ಭಾರತೀಯ ಹೈ ಕಮಿಷನ್ ಭಾನುವಾರ ಭಾರತೀಯ ರಕ್ಷಣಾ ಸಲಕರಣೆಗಳ ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಿತ್ತು.

ಇಲ್ಲಿ ಮಾತನಾಡಿದ ಭಾರತೀಯ ಹೈಕಮಿಷನರ್‌ ಪ್ರಣಯ್‌ ವರ್ಮಾ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ‘ಮೇಕ್ ಇನ್‌ ಇಂಡಿಯಾ, ಮೇಕ್‌ ಫಾರ್‌ ವರ್ಲ್ಡ್’ ಅಡಿಯಲ್ಲಿ ಭಾರತದ ರಕ್ಷಣಾ ಕೈಗಾರಿಕೆಗಳು ಕೆಲಸ ಮಾಡುತ್ತಿವೆ. ಭಾರತದಲ್ಲಿ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಸೇನಾ ಸಲಕರಣೆಗಳನ್ನು ಖರೀದಿಸಿ’ ಎಂದು ಬಾಂಗ್ಲಾ ಸೇನೆಯನ್ನು ಆಹ್ವಾನಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.