ADVERTISEMENT

ರಷ್ಯಾದಿಂದ ತೈಲ ಖರೀದಿಯನ್ನು ಭಾರತ ಕಡಿಮೆಗೊಳಿಸುತ್ತಿದೆ: ಶ್ವೇತಭವನ

ಏಜೆನ್ಸೀಸ್
Published 24 ಅಕ್ಟೋಬರ್ 2025, 15:56 IST
Last Updated 24 ಅಕ್ಟೋಬರ್ 2025, 15:56 IST
ಶ್ವೇತಭವನ
ಶ್ವೇತಭವನ   

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕೋರಿಕೆ ಮೇರೆಗೆ ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಕಡಿಮೆಗೊಳಿಸಲು ಆರಂಭಿಸಿದೆ ಎಂದು ಶ್ವೇತಭವನ ಹೇಳಿದೆ. 

‘ರಷ್ಯಾದಿಂದ ತೈಲ ಖರೀದಿಯನ್ನು ಚೀನಾ ಸಹ ಕಡಿಮೆ ಮಾಡುತ್ತಿದೆ ಎಂಬ ವರದಿಗಳನ್ನು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ನೋಡಿದ್ದೇನೆ. ಭಾರತವೂ ಅದೇ ರೀತಿ ಮಾಡುತ್ತಿದೆ ಎಂಬುದು ಗೊತ್ತಾಗಿದೆ’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್‌ ಲೀವಿಟ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದೇ ರೀತಿ ಯುರೋಪ್‌ ಮಿತ್ರರಾಷ್ಟ್ರಗಳು ಸಹ ರಷ್ಯಾದಿಂದ ತೈಲ ಆಮದುಗಳನ್ನು ಕಡಿತಗೊಳಿಸುವಂತೆ ಅವರು ಆಗ್ರಹಿಸಿದರು.  ‘ರಷ್ಯಾದ ಬೃಹತ್‌ ತೈಲ ಕಂಪನಿಗಳಾದ ರೋಸ್ನೆಫ್ಟ್‌ ಮತ್ತು ಲುಕೋಯಿಲ್ ಮೇಲೆ ಬುಧವಾರ ನಿರ್ಬಂಧ ಹೇರಲಾಗಿದೆ. ಈ ಎರಡೂ ಕಂಪನಿಗಳಿಂದ ರಷ್ಯಾಗೆ ದೊಡ್ಡ ಪ್ರಮಾಣದ ಆದಾಯ ಸಂದಾಯವಾಗುತ್ತಿದೆ. ಅದನ್ನು ಅವರು ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ತೊಡಗಿಸುತ್ತಿದ್ದಾರೆ. ಈ ಕಂಪನಿಗಳ ವಿರುದ್ಧದ ನಿರ್ಬಂಧವು ರಷ್ಯಾಗೆ ಮಾರಕವಾಗಲಿದೆ’ ಎಂದು ಅವರು ಹೇಳಿದರು.

ADVERTISEMENT

ರಷ್ಯಾದಿಂದ ತೈಲ ಆಮದುಗಳನ್ನು ಗಣನೀಯವಾಗಿ ಕಡಿಮೆ ಮಾಡುವುದಾಗಿ ಭಾರತ ಭರವಸೆ ನೀಡಿದೆ ಎಂದು ಅಮೆರಿಕ ಅಧ್ಯಕ್ಷರು ಮತ್ತು ಅವರ ಆಡಳಿತದ ಪ್ರಮುಖರು ಕೆಲ ದಿನಗಳಿಂದ ಹೇಳುತ್ತಿದ್ದಾರೆ.  ಆದರೆ ಭಾರತವು ತನ್ನ ಇಂಧನ ನೀತಿಯು ರಾಷ್ಟ್ರೀಯ ಹಿತಾಸಕ್ತಿಯಿಂದ ನಿರ್ದೇಶಿಸಲ್ಪಟ್ಟಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.