ADVERTISEMENT

ವಿಶ್ವಸಂಸ್ಥೆ ಭದ್ರತಾ ಮಂಡಳಿ ವಿಶೇಷ ಸಭೆಗೆ ಭಾರತ ಆತಿಥ್ಯ

ಪಿಟಿಐ
Published 4 ಆಗಸ್ಟ್ 2022, 12:53 IST
Last Updated 4 ಆಗಸ್ಟ್ 2022, 12:53 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ವಿಶ್ವಸಂಸ್ಥೆ: ಭಯೋತ್ಪಾದನೆ ನಿಗ್ರಹ ಸಂಬಂಧ ಚರ್ಚಿಸಲು ಈ ವರ್ಷದ ಅಕ್ಟೋಬರ್‌ 29ರಂದು ನಡೆಯಲಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವಿಶೇಷ ಸಭೆಗೆ ಭಾರತ ಆತಿಥ್ಯ ವಹಿಸಲಿದೆ.

ಭಾರತವುಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯತ್ವ ಹೊಂದಿದ್ದು, ಎರಡು ವರ್ಷಗಳ ಈ ಸದಸ್ಯತ್ವದ ಅವಧಿ ಈ ವರ್ಷದ ಡಿಸೆಂಬರ್‌ನಲ್ಲಿ ಅಂತ್ಯಗೊಳ್ಳಲಿದೆ.

ಅಮೆರಿಕ, ಚೀನಾ, ರಷ್ಯಾ,ಫ್ರಾನ್ಸ್‌, ಬ್ರಿಟನ್‌, ಅಲ್ಬೇನಿಯಾ, ಬ್ರೆಜಿಲ್‌, ಗಬೊನ್‌, ಘಾನಾ, ಐರ್ಲೆಂಡ್‌, ಕೆನ್ಯಾ, ಮೆಕ್ಸಿಕೊ, ನಾರ್ವೆ ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ (ಯುಎಇ) ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ADVERTISEMENT

‘ನೂತನ ತಂತ್ರಜ್ಞಾನ ಹಾಗೂ ಆವಿಷ್ಕಾರಗಳನ್ನು ದುರ್ಬಳಕೆ ಮಾಡಿಕೊಳ್ಳುವ ಆತಂಕ ಹೆಚ್ಚುತ್ತಿದೆ. ಈ ಕುರಿತು ಚರ್ಚಿಸುವ ಸಲುವಾಗಿಯೇ ಸಭೆ ಕರೆಯಲಾಗಿದೆ’ ಎಂದುಭದ್ರತಾ ಮಂಡಳಿ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.