ನ್ಯೂಯಾರ್ಕ್: ‘ಭಾರತ-ವಿಶ್ವಸಂಸ್ಥೆ ಅಭಿವೃದ್ಧಿ ಸಹಭಾಗಿತ್ವದ ನಿಧಿ’ಯಡಿ ಭಾರತವು ಆಫ್ರಿಕಾದ ಸಿಯೆರಾ ಲಿಯೋನ್ ದೇಶದಲ್ಲಿ ಅಂಗವಿಕಲರ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ₹9.90 ಲಕ್ಷ ಡಾಲರ್ (₹8.52 ಕೋಟಿ) ನೆರವು ಒದಗಿಸಲಿದೆ.
‘ಸಿಯೆರಾ ಲಿಯೋನ್‌ನ ಅಂಗವಿಕಲರ ಆರ್ಥಿಕ ಸ್ವಾತಂತ್ರ್ಯ ಯೋಜನೆ’ಯಡಿ ನೆರವು ನೀಡಲು ಭಾರತಕ್ಕೆ ಸಿಯೆರಾ ಲಿಯೋನ್ ಸರ್ಕಾರ ಕೋರಿತ್ತು.
ಶ್ವಸಂಸ್ಥೆಯ ಭಾರತದ ಶಾಶ್ವತ ಮಿಷನ್ ಈ ಕುರಿತು ಹೇಳಿಕೆ ನೀಡಿದ್ದು, ‘ಸಿಯೆರಾ ಲಿಯೋನ್‌ನ ಗ್ರಾಮೀಣ ಭಾಗದ ಅಂಗವಿಕಲರಿಗೆ ಸುಸ್ಥಿರ ಜೀವನ ಹಾಗೂ ತರಬೇತಿ ನೀಡುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.