ADVERTISEMENT

ದುಬೈ ವಿಮಾನ ನಿಲ್ದಾಣ: ಭಾರತ ಪ್ರಯಾಣಿಕರೇ ಮುಂದು

ಪಿಟಿಐ
Published 19 ಫೆಬ್ರುವರಿ 2024, 15:27 IST
Last Updated 19 ಫೆಬ್ರುವರಿ 2024, 15:27 IST
<div class="paragraphs"><p>ವಿಮಾನ ನಿಲ್ದಾಣ (ಸಂಗ್ರಹ ಚಿತ್ರ)</p></div>

ವಿಮಾನ ನಿಲ್ದಾಣ (ಸಂಗ್ರಹ ಚಿತ್ರ)

   

ದುಬೈ: ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸಂಚರಿಸಿದ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರತೀಯರು ಅಗ್ರಸ್ಥಾನದಲ್ಲಿದ್ದಾರೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.

2023ರ ಸಾಲಿನಲ್ಲಿ ದುಬೈ ನಿಲ್ದಾಣದ ಮೂಲಕ ಒಟ್ಟು 8.69 ಕೋಟಿ ಮಂದಿ ಪ್ರಯಾಣಿಸಿದ್ದಾರೆ. ಇದರಲ್ಲಿ ಭಾರತದ ಪ್ರಯಾಣಿಕರ ಸಂಖ್ಯೆ 1.19 ಕೋಟಿಯಷ್ಟಿದೆ ಎಂದು ಸೋಮವಾರ ಬಿಡುಗಡೆಗೊಳಿಸಿದ ಅಂಕಿ–ಅಂಶ ತಿಳಿಸಿದೆ. ‌

ADVERTISEMENT

ಪ್ರಯಾಣಿಕರ ಸಂಖ್ಯೆಯಲ್ಲಿ ಸೌದಿ ಅರೇಬಿಯಾ (67 ಲಕ್ಷ ಪ್ರಯಾಣಿಕರು), ಭಾರತದ ಬಳಿಕ ಎರಡನೇ ಸ್ಥಾನದಲ್ಲಿದೆ. ಬ್ರಿಟನ್ (59 ಲಕ್ಷ), ಪಾಕಿಸ್ತಾನ (42 ಲಕ್ಷ), ಅಮೆರಿಕ (36 ಲಕ್ಷ), ರಷ್ಯಾ (25 ಲಕ್ಷ) ಮತ್ತು ಜರ್ಮನಿ (25 ಲಕ್ಷ) ಬಳಿಕದ ಸ್ಥಾನಗಳಲ್ಲಿವೆ.

ದುಬೈ ನಿಲ್ದಾಣದಿಂದ 104 ದೇಶಗಳ 262 ತಾಣಗಳಿಗೆ ವಿಮಾನ ಸಂಪರ್ಕ ಇದ್ದು, ಒಟ್ಟು 102 ವಿಮಾನಯಾನ ಕಂಪನಿಗಳು ಕಾರ್ಯಾಚರಿಸುತ್ತಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.