ADVERTISEMENT

ಪ್ಲಾಸ್ಟಿಕ್‌ ಬಳಕೆ ನೀತಿ ಬೆಂಬಲಿಸಲು ಭಾರತೀಯ ಅಮೆರಿಕನ್‌ ಉದ್ಯಮಿ ಮನವಿ

ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ನೇತೃತ್ವದಲ್ಲಿ ದುಂಡುಮೇಜಿನ ಸಭೆ

ಪಿಟಿಐ
Published 17 ಮಾರ್ಚ್ 2021, 5:34 IST
Last Updated 17 ಮಾರ್ಚ್ 2021, 5:34 IST
ಕಮಲಾ ಹ್ಯಾರಿಸ್‌
ಕಮಲಾ ಹ್ಯಾರಿಸ್‌   

ವಾಷಿಂಗ್ಟನ್‌: ಪ್ಲಾಸ್ಟಿಕ್‌ ಬಳಕೆಗೆ ಸಂಬಂಧಿಸಿದಂತೆ ಜಾಗತಿಕ ನೀತಿಯೊಂದನ್ನು ರೂಪಿಸಲು ಬೆಂಬಲ ನೀಡುವಂತೆ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರಿಗೆ ಭಾರತೀಯ ಅಮೆರಿಕನ್‌ ಉದ್ಯಮಿ ಲಲಿತಾ ಚಿತ್ತೂರ್ ಮನವಿ ಮಾಡಿದರು.

ಡೆನ್ವರ್‌ನಲ್ಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ದುಂಡುಮೇಜಿನ ಸಭೆಯಲ್ಲಿ ಪಾಲ್ಗೊಂಡಿದ್ದ ಚಿತ್ತೂರ್‌, ಮಹಿಳೆಯರ ಸಬಲೀಕರಣಕ್ಕೆ ಸಂಬಂಧಿಸಿದ ಹಲವಾರು ವಿಷಯ ಪ್ರಸ್ತಾಪಿಸಿ ಗಮನ ಸೆಳೆದರು.

ಇಕೊ ಆಲ್‌ ಟ್ರೇಡಿಂಗ್‌ ಎಲ್‌ಎಲ್‌ಸಿ ಎಂಬ ಉದ್ಯಮದ ಮುಖ್ಯಸ್ಥೆಯಾಗಿರುವ ಲಲಿತಾ ಅವರು, ಸ್ಟೇನ್‌ಲೆಸ್‌ ಸ್ಟೀಲ್‌, ಬಂಬೂ, ಬರ್ಚ್‌ ಮರದಿಂದ ಮಾಡಿದ ವಸ್ತುಗಳನ್ನು ಭಾರತದಿಂದ ಆಮದು ಮಾಡಿಕೊಳ್ಳುತ್ತಾರೆ. ಈ ವಸ್ತುಗಳ ಮಾರಾಟದಿಂದ ಬರುವ ಹಣವನ್ನು ಭಾರತದಲ್ಲಿರುವ ವಿಧವೆಯರ ನೆರವಿಗಾಗಿ ವಿನಿಯೋಗಿಸುತ್ತಾರೆ.

ADVERTISEMENT

ಲಲಿತಾ ಅವರು ಚೆನ್ನೈನಲ್ಲಿ ಜನಿಸಿದರು. ಅಮೆರಿಕದ ಪೌರತ್ವ ಪಡೆದಿರುವ ಅವರು, ಮಗಳ ಒತ್ತಾಸೆ ಮೇರೆಗೆ ಈ ಉದ್ಯಮವನ್ನು ಆರಂಭಿಸಿದ್ದಾರೆ. ರೆಸ್ಟೋರೆಂಟ್‌, ಶಾಲಾ–ಕಾಲೇಜುಗಳು, ಆಸ್ಪತ್ರೆಗಳು ಹಾಗೂ ಜೈಲುಗಳಲ್ಲಿರುವ ಕ್ಯಾಂಟೀನ್‌ಗಳಿಗೆ ಕಂಪನಿಯು ಭಾರತದಿಂದ ಆಮದು ಮಾಡಿಕೊಳ್ಳುವ ವಸ್ತುಗಳನ್ನು ಮಾರಾಟ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.