ADVERTISEMENT

ಭಾರತದಲ್ಲಿ ಕೋವಿಡ್‌: ಕಮಲಾ ಹ್ಯಾರಿಸ್‌–ಅಮಿ ಬೇರಾ ಚರ್ಚೆ

ಪಿಟಿಐ
Published 13 ಮೇ 2021, 7:43 IST
Last Updated 13 ಮೇ 2021, 7:43 IST
ಕಮಲಾ ಹ್ಯಾರಿಸ್‌
ಕಮಲಾ ಹ್ಯಾರಿಸ್‌   

ವಾಷಿಂಗ್ಟನ್: ದೀರ್ಘ ಕಾಲದಿಂದ ಅಮೆರಿಕದ ಸಂಸದರಾಗಿರುವ ಭಾರತೀಯ ಸಂಜಾತ ಅಮಿ ಬೇರಾ ಅವರು ಶ್ವೇತಭವನದಲ್ಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರನ್ನು ಭೇಟಿ ಮಾಡಿ ಭಾರತದಲ್ಲಿನ ಕೋವಿಡ್‌–19ರ ಬಿಕ್ಕಟ್ಟಿನ ಕುರಿತು ಚರ್ಚೆ ನಡೆಸಿದರು.

ಧನಸಹಾಯ, ತಾಂತ್ರಿಕ ಪರಿಣತಿ ಮತ್ತು ಲಸಿಕೆ ಪ್ರಮಾಣವನ್ನು ಒಳಗೊಂಡಂತೆ ಭಾರತೀಯರಿಗೆ ತುರ್ತಾಗಿ ಅಗತ್ಯವಿರುವ ಸಂಪನ್ಮೂಲಗಳನ್ನು ಕಳುಹಿಸಿದ್ದಕ್ಕಾಗಿ ಬೈಡನ್‌ ಆಡಳಿತಕ್ಕೆ ಅವರು ಇದೇ ವೇಳೆ ಧನ್ಯವಾದ ಅರ್ಪಿಸಿದರು.

ಭಾರತೀಯರಿಗೆ ನೆರವು ನೀಡಲು ಭಾರತೀಯ- ಅಮೆರಿಕನ್ ವಲಸಿಗರನ್ನು ಸಜ್ಜುಗೊಳಿಸಲು ಸಹಾಯ ಮಾಡಿದ ಉಪಾಧ್ಯಕ್ಷೆ ಹ್ಯಾರಿಸ್ ಅವರ ನಾಯಕತ್ವವನ್ನು ಅವರು ಶ್ಲಾಘಿಸಿದರು.

ADVERTISEMENT

ಭಾರತ ಮತ್ತು ಜಗತ್ತಿನಾದ್ಯಂತ ಹಬ್ಬಿರುವ ಈ ಸಾಂಕ್ರಾಮಿಕ ರೋಗ ತಡೆಯಲು ಅಮೆರಿಕ ನೆರವು ಮುಂದುವರಿಸಬೇಕು. ಆ ಮೂಲಕ ಅಮೆರಿಕ ಸಕ್ರಿಯ ಜಾಗತಿಕ ನಾಯಕನಾಗಿ ಮುಂದುವರಿಯುತ್ತದೆ. ಈ ಸಾಂಕ್ರಾಮಿಕದಿಂದ ಜೀವಗಳನ್ನು ಉಳಿಸಲು ಮತ್ತು ಸಾಂಕ್ರಾಮಿಕವನ್ನು ಕೊನೆಗೊಳಿಸಲು ಅಮೆರಿಕದ ನಾಯಕತ್ವ ನಿರ್ಣಾಯಕವಾದದ್ದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.