ADVERTISEMENT

ಭಾರತ ಸಂಜಾತ ಅಮೆರಿಕದ ಸಂಸದೆ ಪ್ರಮೀಳಾ ಜಯಪಾಲ್‌ಗೆ ಸ್ವದೇಶಕ್ಕೆ ಹೋಗುವಂತೆ ಬೆದರಿಕೆ

ಪಿಟಿಐ
Published 9 ಸೆಪ್ಟೆಂಬರ್ 2022, 6:26 IST
Last Updated 9 ಸೆಪ್ಟೆಂಬರ್ 2022, 6:26 IST
ಭಾರತ ಸಂಜಾತ ಅಮೆರಿಕದ ಸಂಸದೆ ಪ್ರಮೀಳಾ ಜಯಪಾಲ್‌
ಭಾರತ ಸಂಜಾತ ಅಮೆರಿಕದ ಸಂಸದೆ ಪ್ರಮೀಳಾ ಜಯಪಾಲ್‌   

ವಾಷಿಂಗ್ಟನ್‌: ಭಾರತ ಸಂಜಾತ ಅಮೆರಿಕದ ಸಂಸದೆ ಪ್ರಮೀಳಾ ಜಯಪಾಲ್‌ ಅವರಿಗೆ ಸ್ವದೇಶಕ್ಕೆ ವಾಪಸ್‌ ಹೋಗುವಂತೆ ವ್ಯಕ್ತಿಯೊಬ್ಬ ಬೆದರಿಕೆ ಒಡ್ಡಿದ್ದಾನೆ. ಸಂಸದೆಯನ್ನು ನಿಂದಿಸಿ ಐದು ಆಡಿಯೋ ಸಂದೇಶಗಳನ್ನು ಗುರುವಾರ ಕಳುಹಿಸಲಾಗಿದೆ.

ಎಲ್ಲ ಸಂದೇಶಗಳಲ್ಲೂ ಅವಾಚ್ಯ ಪದಗಳು ತುಂಬಿರುವುದರಿಂದ ಅವುಗಳನ್ನು ತಡೆಹಿಡಿಯಲಾಗಿದೆ. ಈ ಪೈಕಿ ಒಂದು ಸಂದೇಶದಲ್ಲಿ ಚೆನ್ನೈ ಮೂಲದ ಸಂಸದೆಯನ್ನು ಭಾರತಕ್ಕೆ ವಾಪಸ್‌ ಹೋಗುವಂತೆ ಬೆದರಿಕೆ ಒಡ್ಡಲಾಗಿದೆ.

ಜುಲೈ ತಿಂಗಳಲ್ಲಿ ಪ್ರಮಿಳಾ ಅವರ ನಿವಾಸದ ಎದುರು ವ್ಯಕ್ತಿಯೊಬ್ಬ ಪಿಸ್ತೂಲ್‌ ಹಿಡಿದು ನಿಂತಿದ್ದ. ‘ಭಾರತಕ್ಕೆ ಹೊರಟು ಹೋಗಿ’ ಎಂದು ಕೂಗಾಡಿದ್ದ. ಕೊನೆಗೆ ಆತನನ್ನು ಬಂಧಿಸಲಾಗಿತ್ತು.

ADVERTISEMENT

ಇದು ಅಮೆರಿಕದಲ್ಲಿ ಭಾರತೀಯ ಮೂಲದವರ ವಿರುದ್ಧ ನಡೆದ ಇತ್ತೀಚಿನ ದ್ವೇಷಪೂರಿತ ಘಟನೆಯಾಗಿದೆ. ಸೆಪ್ಟೆಂಬರ್‌ 1ರಂದು ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ಅಲ್ಲಿನ ಸ್ಥಳೀಯ ವ್ಯಕ್ತಿಯೊಬ್ಬ ಕೊಳಕು ಹಿಂದೂ, ಜಿಗುಪ್ಸೆ ತರಿಸುವ ನಾಯಿ ಎಂದೆಲ್ಲ ನಿಂದಿಸಿದ್ದ.

ಆಗಸ್ಟ್‌ 26ರಂದು ಟೆಕ್ಸಾಸ್‌ನಲ್ಲಿ ನಾಲ್ವರು ಭಾರತೀಯ ಮೂಲದ ಮಹಿಳೆಯರ ಮೇಲೆ ಹಲ್ಲೆ ನಡೆಸಿ, ನಿಂದಿಸಲಾಗಿತ್ತು. ಸ್ಥಳೀಯ ಮಹಿಳೆಯೊಬ್ಬರು, ಅಮೆರಿಕದ ತುಂಬೆಲ್ಲ ಭಾರತೀಯರೇ ತುಂಬಿದ್ದಾರೆ, ಅವರು ವಾಪಸ್‌ ಭಾರತಕ್ಕೆ ಹೋಗಬೇಕು ಎಂದೆಲ್ಲ ಕೂಗಾಡಿದ್ದರು. ಇಂತಹ ಘಟನೆಗಳು ಡಲ್ಲಾಸ್‌, ಟೆಕ್ಸಾಸ್‌ನಲ್ಲಿ ಹೆಚ್ಚು ಸಂಭವಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.