ADVERTISEMENT

ಕಮಲಾ ಹ್ಯಾರಿಸ್ ಉಪ ಪತ್ರಿಕಾ ಕಾರ್ಯದರ್ಶಿಯಾಗಿ ಭಾರತ ಮೂಲದ ಸಬ್ರಿನಾ ಸಿಂಗ್ ನೇಮಕ

ಪಿಟಿಐ
Published 9 ಜನವರಿ 2021, 11:09 IST
Last Updated 9 ಜನವರಿ 2021, 11:09 IST
ಸಬ್ರಿನಾ ಸಿಂಗ್‌
ಸಬ್ರಿನಾ ಸಿಂಗ್‌   

ವಾಷಿಂಗ್ಟನ್: ಭಾರತೀಯ– ಅಮೆರಿಕನ್ ಸಬ್ರಿನಾ ಸಿಂಗ್ ಅವರನ್ನು ಶ್ವೇತಭವನದ ಉಪಾಧ್ಯಕ್ಷರ ಉಪ ಪತ್ರಿಕಾ ಕಾರ್ಯದರ್ಶಿಯನ್ನಾಗಿ ನೇಮಿಸಲಾಗುವುದು ಎಂದು ಬೈಡನ್– ಕಮಲಾ ಅಧಿಕಾರ ಹಸ್ತಾಂತರ ಪ್ರಕ್ರಿಯಾ ತಂಡದ ಪ್ರಕಟಣೆ ತಿಳಿಸಿದೆ.

ಸಿಂಗ್ ಅವರು, ಚುನಾವಣೆ ಪ್ರಚಾರದ ಅವಧಿಯಲ್ಲಿ ಬೈಡನ್ – ಕಮಲಾ ಅವರ ಪತ್ರಿಕಾ ಕಾರ್ಯದರ್ಶಿಯಾಗಿದ್ದರು. ಇದಕ್ಕೂ ಮುನ್ನ ಮೈಕ್ ಬ್ಲೂಮ್‌ ಬರ್ಗ್‌ನ ಅಧ್ಯಕ್ಷೀಯ ಚುನಾವಣಾ ಪ್ರಚಾರದಲ್ಲಿ ಹಿರಿಯ ವಕ್ತಾರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT