ADVERTISEMENT

ಭಾರತ ಮೂಲದ ಅಮೆರಿಕನ್ ವಿಜ್ಞಾನಿ ರತನ್ ಲಾಲ್‌ಗೆ ವಿಶ್ವ ಆಹಾರ ಪ್ರಶಸ್ತಿ

ಪಿಟಿಐ
Published 12 ಜೂನ್ 2020, 6:07 IST
Last Updated 12 ಜೂನ್ 2020, 6:07 IST
ಭಾರತ ಮೂಲದ ಅಮೆರಿಕನ್‌ ವಿಜ್ಞಾನಿ ರತನ್‌ ಲಾಲ್
ಭಾರತ ಮೂಲದ ಅಮೆರಿಕನ್‌ ವಿಜ್ಞಾನಿ ರತನ್‌ ಲಾಲ್   

ನ್ಯೂಯಾರ್ಕ್: ಭಾರತೀಯ–ಅಮೆರಿಕನ್ ಮಣ್ಣು ವಿಜ್ಞಾನಿ ರತನ್ ಲಾಲ್ ಅವರು ಅಮೆರಿಕದ ಪ್ರತಿಷ್ಠಿತ 2020ರ ವಿಶ್ವ ಆಹಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಪ್ರಶಸ್ತಿಯು ₹ 1.90 ಕೋಟಿ ನಗದು ಮೊತ್ತವನ್ನು ಒಳಗೊಂಡಿದೆ.

‘ಮಣ್ಣು ವಿಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆಗಾಗಿ ರತನ್ ಲಾಲ್ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಆಹಾರ ಉತ್ಪಾದನೆಯ ಹೆಚ್ಚಳ ಮತ್ತು ಪೋಷಕಾಂಶಗಳ ಮರುಬಳಕೆ ಕುರಿತು ಸಂಶೋಧನಾ ಕಾರ್ಯದಿಂದ ರತನ್ ಅವರು ಲಕ್ಷಾಂತರ ಸಣ್ಣ ರೈತರಿಗೆ ಸಹಾಯ ಮಾಡಿದ್ದಾರೆ’ ಎಂದುಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT