ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್ ಪರ ಪ್ರಚಾರದಲ್ಲಿ ಭಾರತ ಸಂಜಾತ ಅಮೆರಿಕನ್ನರನ್ನು ಮತ್ತು ಏಷ್ಯಾ ಮೂಲದ ಅಮೆರಿಕನ್ ಸಮುದಾಯದವರನ್ನು ಸಂಘಟಿಸುವಲ್ಲಿ ಅಮಿತ್ ಜಾನಿ ಪ್ರಮುಖ ಪಾತ್ರ ವಹಿಸಿದ್ದರು.
ಮೂಲತಃ ಭಾರತದವರಾದ ಅಮಿತ್ ಅವರು ಪ್ರಚಾರ ಕಾರ್ಯದ ನಿರ್ದೇಶಕರಾಗಿದ್ದರು. ಸುಮಾರು ನೂರು ವಿಧದ ಭಾಷಿಕರನ್ನು ಮತ್ತು 50 ವಿವಿಧ ಜನಾಂಗೀಯದವರನ್ನು ಇವರು ಒಗ್ಗೂಡಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಹತ್ತಾರು ಮಂದಿ ಪೈಪೋಟಿ ನಡೆಸುತ್ತಿದ್ದ ವೇಳೆಯಲ್ಲೇ ಅಮಿತ್ ಅವರು ಬೈಡನ್ ಪರ ಪ್ರಚಾರಕ್ಕೆ ಸಜ್ಜಾಗಿದ್ದರು. ಇವರು ಭಾರತದ ಗುಜರಾತ್‌ನ ರಾಜ್‌ಕೋಟ್‌ನವರು.
ಭಾರತ ಸಂಜಾತ ಅಮೆರಿಕನ್ನರು ಮತ್ತು ಏಷ್ಯಾ ಮೂಲದ ಅಮೆರಿಕನ್ ಸಮುದಾಯದವರು ಹಿಂದಿನ ಚುನಾವಣೆಗಿಂತ ಈ ಬಾರಿ ಶೇಕಡಾ 5ರಷ್ಟು ಹೆಚ್ಚು ಮಂದಿ ಮತ ಚಲಾಯಿಸಿದ್ದರು. ಅಲ್ಲದೆ ಈ ಸಮುದಾಯದ ಶೇ 71ರಷ್ಟು ಮಂದಿ ಬೈಡನ್ ಅವರಿಗೆ ಮತ ಚಲಾಯಿಸಿದ್ದರು ಎಂದು ಟಾರ್ಗೆಟ್ ಸ್ಮಾರ್ಟ್ ಸಿಇಒ ಟಾಮ್ ಬೊನಿಯೆರ್ ಅವರ ಅಧ್ಯಯನದ ಅಂಕಿಅಂಶಗಳ ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.