ADVERTISEMENT

ಅಮೆರಿಕದಲ್ಲಿ ಭಾರತದ 75ನೇ ಸ್ವಾತಂತ್ರ್ಯೋತ್ಸವಕ್ಕೆ ಸಿದ್ಧತೆ

ಪಿಟಿಐ
Published 13 ಆಗಸ್ಟ್ 2021, 5:44 IST
Last Updated 13 ಆಗಸ್ಟ್ 2021, 5:44 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ನಲವತ್ತು ಲಕ್ಷದಷ್ಟು ಭಾರತೀಯ ಮೂಲದವರು ನೆಲೆಸಿರುವ ಅಮೆರಿಕದ ವಿವಿಧೆಡೆ, ಭಾರತದ 75ನೇ ಸ್ರಾತಂತ್ರ್ಯೋತ್ಸವ ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಯುತ್ತಿದೆ.

ಸ್ವಾತಂತ್ರ್ಯೋತ್ಸವದ ಅಂಗವಾಗಿ ಭಾನುವಾರ ನ್ಯೂಯಾರ್ಕ್‌ನ ಐಕಾನ್ ಟೈಮ್ಸ್ ಸ್ಕ್ವೇರ್‌ನಲ್ಲಿ ಭಾರತೀಯ ಸಂಘಗಳ ಒಕ್ಕೂಟ (ಎಫ್‌ಐಎ) ಭಾರತದ ಬೃಹತ್‌ ತ್ರಿವರ್ಣ ಧ್ವಜವನ್ನು ಹಾರಿಸಲು ಸಜ್ಜಾಗುತ್ತಿದೆ. 60 ಚದರ ಅಡಿ ಅಗಲದ ತ್ರಿವರ್ಣ ಧ್ವಜವನ್ನು 25 ಅಡಿ ಉದ್ದದ ಕಂಬದ ಮೇಲೆ ಹಾರಿಸಲಾಗುತ್ತಿದೆ. ಇಂಥ ಹಲವು ಕಾರ್ಯಕ್ರಮಗಳ ಮೂಲಕ ಅಮೆರಿಕದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆಗಳು ನಡೆಯುತ್ತಿವೆ.

‘ಈ ಬಾರಿ ಸ್ವಾತಂತ್ರ್ಯೋತ್ಸವ, ಭಾರತದ 140 ಕೋಟಿ ಜನರು ಮತ್ತು ಅಮೆರಿಕದಲ್ಲಿರುವ 45 ಲಕ್ಷ ಭಾರತೀಯ ಮೂಲದ ಅಮೆರಿಕನ್ನರಿಗೆ ಐತಿಹಾಸಿಕ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ನಾವು ಟೈಮ್ಸ್‌ ಸ್ಕ್ವೇರ್‌ನಲ್ಲಿ ಬೃಹತ್ ತ್ರಿವರ್ಣ ಧ್ವಜಾರೋಹಣ ಮಾಡುತ್ತಿದ್ದೇವೆ‘ ಎಂದು ಎಫ್‌ಐಎ ಸಂಸ್ಥೆಯ ಅಂಕುರ್ ವಿದ್ಯಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ADVERTISEMENT

ಈ ವಾರಾಂತ್ಯದಲ್ಲಿ ಅಮೆರಿಕದ ಎಂಪೈರ್‌ ಸ್ಟೇಟ್‌ ಸೇರಿದಂತೆ ಕೆಲವು ಕಟ್ಟಡಗಳ ಮೇಲೆ ತ್ರಿವರ್ಣ ಧ್ವಜ ಹಾರಾಡಲಿದೆ. ಭಾರತೀಯ – ಅಮೆರಿಕನ್ ಪ್ರಜೆಗಳ ಮತ್ತೊಂದು ಗುಂಪು ಹಡ್ಸನ್ ನದಿಯಲ್ಲಿ ದೋಣಿ ಮೇಲೆ ಸ್ವಾತಂತ್ರ್ಯೋತ್ಸವ ದಿನವನ್ನು ಆಚರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.