ADVERTISEMENT

ಭಾರತ ಮೂಲದ ಅಮೆರಿಕನ್ನರು ಹೆಚ್ಚು ಕ್ರಿಯಾಶೀಲರು: ಕ್ಯಾಲಿಫೋರ್ನಿಯಾ ಪ್ರೊಫೆಸರ್

ಪಿಟಿಐ
Published 8 ಫೆಬ್ರುವರಿ 2023, 14:52 IST
Last Updated 8 ಫೆಬ್ರುವರಿ 2023, 14:52 IST
.
.   

ವಾಷಿಂಗ್ಟನ್‌: ‘ಅಮೆರಿಕದಲ್ಲಿರುವ ಭಾರತ ಮೂಲದ ಅಮೆರಿಕನ್ನರು ದೇಶದ ರಾಜಕೀಯ ಪ್ರಕ್ರಿಯೆಯಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದಾರೆ ಹಾಗೂ ಸ್ಪರ್ಧಾ ಮನೋಭಾವವುಳ್ಳವರಾಗಿದ್ದಾರೆ’ ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಾರ್ವಜನಿಕ ನೀತಿ ಹಾಗೂ ರಾಜ್ಯಶಾಸ್ತ್ರ ಪ್ರೊಫೆಸರ್‌ ಕಾರ್ತಿಕ್‌ ರಾಮಕೃಷ್ಣನ್‌ ಹೇಳಿದ್ದಾರೆ.

‘ಭಾರತ ಮೂಲದ ಅಮೆರಿಕನ್ನರು ಒಂದು ಗುಂಪಾಗಿ ವೇಗವಾಗಿ ಬೆಳೆಯುತ್ತಿದ್ದಾರೆ. ಅಲ್ಲದೆ, ಏಷ್ಯಾದಿಂದ ಬಂದ ವಲಸಿಗರಲ್ಲಿ ಅಧಿಕ ಮತದಾನದ ಪ್ರಮಾಣವನ್ನು ಹೊಂದಿದ್ದಾರೆ. ಇವರೆಲ್ಲರೂ ದೊಡ್ಡ ಪ್ರಜಾಪ್ರಭುತ್ವದ ದೇಶದಿಂದ ಬಂದಿರುವುದೂ ಈ ಬೆಳವಣಿಗೆಗೆ ಒಂದು ಕಾರಣ’ ಎಂದಿದ್ದಾರೆ.

‘ಇವರೆಲ್ಲರೂ ಉನ್ನತ ಇಂಗ್ಲಿಷ್‌ ಜ್ಞಾನವನ್ನು ಹೊಂದಿದ್ದಾರೆ. ಆದ್ದರಿಂದ ಹಲವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ’ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.